ತಡವಾಗಿ ಬರೋ 108 ಆಯಂಬ್ಯುಲೆನ್ಸ್ಅನ್ನು ರೆಡ್ಹ್ಯಾಂಡ್ ಆಗಿ ಹಿಡಿದ ತಹಶೀಲ್ದಾರ್..!

ತುಮಕೂರು: 108 ಆಯಂಬ್ಯುಲೆನ್ಸ್ ಸೇವೆಯನ್ನು ಶುರು ಮಾಡಿದ್ದೇ ರೋಗಿಗಳಿಗೆ ತಕ್ಷಣ ಚಿಕಿತ್ಸೆ ಲಭ್ಯ ಆಗಲಿ ಎಂದು. ಆದರೆ ಇಲ್ಲಿ ಮಾತ್ರ ಆಯಂಬುಲೆನ್ಸ್ನವರು 1 ಗಂಟೆ ಕಾಯಲು ಹೇಳಿದ್ದಾರೆ!
ಕೆಲವು ದಿನಗಳಿಂದ ಕೊರಟಗೆರೆ ತಾಲೂಕಿನ ತಹಶೀಲ್ದಾರ್ ನಹೀದಾ ಜಂ ಜಂ ಅವರಿಗೆ ರೋಗಿಗಳಿಂದ ಆಯಂಬ್ಯುಲೆನ್ಸ್ ಬಗ್ಗೆ ಹತ್ತಾರು ದೂರುಗಳು ಬರುತ್ತಿದ್ದವು.
ಈ ಹಿನ್ನೆಲೆ ತಹಶೀಲ್ದಾರ್ ಸ್ವತಃ ರಿಯಾಲಿಟಿ ಚೆಕ್ಗೆ ಇಳಿದಿದ್ದಾರೆ. ಈ ಸಂದರ್ಭ ರಿಯಾಲಿಟಿ ಚೆಕ್ ನಲ್ಲಿ 108 ಆಂಬ್ಯುಲೆನ್ಸ್ ಸೇವೆ ಸಿಬ್ಬಂದಿಯ ನಿರ್ಲಕ್ಷ್ಯ ಬಯಲಾಗಿದೆ.
ತಹಶೀಲ್ದಾರ್ ನಹೀದಾ, ‘ರಾಮಕ್ಕ’ ಹೆಸರಿನಲ್ಲಿ 108 ಸಿಬ್ಬಂದಿಗೆ ಕರೆ ಮಾಡಿದ್ದಾರೆ. ತಮಗೆ ಕೊರಟಗೆರೆ ಸಮೀಪದ ವಡ್ಡಗೆರೆ ಕ್ರಾಸ್ನಲ್ಲಿ ಅಪಘಾತವಾಗಿದೆ. ತುರ್ತಾಗಿ ಬನ್ನು ಎಂದಯ ತಹಶೀಲ್ದಾರ್ ಕರೆ ಮಾಡಿದ್ದಾರೆ ತಹಶೀಲ್ದಾರ್ ನಿನ್ನೆ ಸಂಜೆ 5 ಗಂಟೆ 02 ನಿಮಿಷಕ್ಕೆ 108 ಕ್ಕೆ ಕರೆ ಮಾಡಿದ್ದರು ಆದರೆ ಆಯಂಬುಲೆನ್ಸ್, ಸಂಜೆ 5ಗಂಟೆ 45 ನಿಮಿಷಕ್ಕೆ ಬಂದು ಸ್ಥಳಕ್ಕೆ ತಲುಪಿದೆ.
ಫೋನಿನಲ್ಲಿ ಆಂಬ್ಯುಲೆನ್ಸ್ ಸಿಬ್ಬಂದಿ ಜೊತೆ ತಹಶೀಲ್ದಾರ್ 7 ನಿಮಿಷ ಸಂಭಾಷಣೆ ನಡೆಸಿದ್ದಾರೆ. ಆದರೆ 108 ಆಂಬ್ಯುಲೆನ್ಸ್ ಸಿಬ್ಬಂದಿಯಿಂದ ತಹಶೀಲ್ದಾರ್ ನಾಹೀದಾಗೆ ಹಾರಿಕೆಯ ಉತ್ತರ ಸಿಕ್ಕಿದೆ. ತಹಶೀಲ್ದಾರ್‌ಗೆ ಅಂಬ್ಯುಲೇನ್ಸ್ ಬರಲು 1 ಗಂಟೆ ತಡ ಆಗುತ್ತೇ ಕಾಯ್ತಿರಾ ಎಂದ ಆಂಬ್ಯುಲೆನ್ಸ್ ಸಿಬ್ಬಂದಿ.
ವಾಸ್ತವವಾಗಿ ತೋವಿನಕೆರೆಯಿಂದ ಕೊರಟಗೆರೆ ಪಟ್ಟಣಕ್ಕೆ ಆಗಮನಿಸಲು 20 ನಿಮಿಷ ಸಾಕು. ಆದರೆ ಸಿಬ್ಬಂದಿ, ಆಂಬ್ಯುಲೆನ್ಸ್ ಖಾಲಿ ಇದ್ದರು ಸಕಾಲಕ್ಕೆ ಆಗಮಿಸದೆ ಕರ್ತವ್ಯಲೋಪ ಎಸಗಿದ್ದಾರೆ. ಈ ಹಿನ್ನೆಲೆಯಲ್ಲಿ 108 ತುರ್ತುವಾಹನ ಸೇವೆಯ ಬಗ್ಗೆ ಜಿಲ್ಲಾಧಿಕಾರಿ ಮತ್ತು ಡಿಹೆಚ್‌ಓಗೆ ತಹಶೀಲ್ದಾರ್ ನಹಿದಾ ಜಂ ಜಂ ದೂರು ನೀಡಿದ್ದಾರೆ.
