Breaking NewsLatestಕ್ರೈಂರಾಷ್ಟ್ರೀಯವಿದೇಶಸುದ್ದಿ

ರಷ್ಯಾ ಪರವಾಗಿ ರಣರಂಗಕ್ಕೆ ಇಳಿಯಲಿದ್ದಾರೆ ಸಿರಿಯಾದ 16 ಸಾವಿರ ಸೈನಿಕರು!

ರಷ್ಯಾ: ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ 17ನೇ ದಿನಕ್ಕೆ ಕಾಲಿಟ್ಟಿದೆ. ಬಹುತೇಕ ರಷ್ಯಾ ಉಕ್ರೇನ್ ರಾಜಧಾನಿ ಕೀವ್ ಮುಂದೆ ಬಂದು ನಿಂತಿದೆ. ಆದ್ರೆ ಇನ್ನು ಕೀವ್ ಸಂಪೂರ್ಣವಾಗಿ ವಶವಾಗಿಲ್ಲ. ರಷ್ಯದ ಸಾಲು ಸಾಲು ಟ್ಯಾಂಕರ್ ಗಳು ನಿರ್ನಾಮವಾಗಿದೆ. ಅಲ್ಲದೆ ಸಾಕಷ್ಟು ಮಂದಿ ಸೈನಿಕರು ಹತರಾಗಿದ್ದಾರೆ. ಉಕ್ರೇನ್ ನಗರಗಳು ಬಹುತೇಕ ಸ್ಮಶಾನಗಳಾಗಿವೆ. ಅಲ್ಲಲ್ಲಿ ಶವಗಳು ಬಿದ್ದಿದ್ದು, ಸಾಮೂಹಿಕ ಸಂಸ್ಕಾರ ಮಾಡಲಾಗುತ್ತಿದೆ. ರಷ್ಯಾಗೆ ಇದೀಗ ಸೈನಿಕರ ಅವಶ್ಯಕತೆ ಇದ್ದು, ರಷ್ಯಾ ಸೇನೆ ಪರ ಹೋರಾಡಲು ಸಿರಿಯಾ ಸೈನಿಕರನ್ನ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಹೌದು..ರಷ್ಯಾ ಸೇನೆ ಪರ ಉಕ್ರೇನ್​ನಲ್ಲಿ ಹೋರಾಡಲು ಸಿರಿಯಾ ದೇಶದ 16 ಸಾವಿರ ಫೈಟರ್​ಗಳ ನೇಮಕ ಮಾಡಲಾಗಿದೆ. ಸಿರಿಯಾ ಫೈಟರ್​ಗಳು ಉಕ್ರೇನ್​ಗೆ ಹೋಗಿ ರಷ್ಯಾ ಪರ ಹೋರಾಟ ಮಾಡಲಿದ್ದಾರೆ. ಸಿರಿಯಾ ಪೈಟರ್​ಗಳಿಗೆ ರಷ್ಯಾ ಸರ್ಕಾರ ತಿಂಗಳಿಗೆ 3 ಸಾವಿರ ಡಾಲರ್ ಹಣ ನೀಡುತ್ತದೆ. ಸಿರಿಯಾ ಸೈನಿಕರಿಗೆ ಸಿರಿಯಾ ಸೇನೆ ನೀಡುವ ಸಂಬಳದ 50 ಪಟ್ಟು ಹೆಚ್ಚು ಹಣ ರಷ್ಯಾ ಸರ್ಕಾರ ನೀಡುತ್ತದೆ. ಸಿರಿಯಾ ಯೋಧರನ್ನು ಸಿರಿಯಾದ ಕೊಲೆಗಡುಕರು ಎಂದು ಉಕ್ರೇನ್ ಅಧ್ಯಕ್ಷ ವಾಡ್ಲಿಮಿರ್ ಜೆಲೆನ್ ಸ್ಕಿ ಹೇಳಿದ್ದಾರೆ. ಹೀಗಾಗಿ ಸೇಡಿಗಾಗಿ ಹಪಾಹಪಿಸುತ್ತಿರುವ ಸಿರಿಯಾ ಸೇನೆ ರಷ್ಯಾ ದೇಶದ ಪರವಾಗಿ ಉಕ್ರೇನ್ ನಲ್ಲಿ ಕ್ರೌರ್ಯ ಮೆರೆಯಲಿದೆ.  ಇತ್ತ ರಷ್ಯಾ ರಕ್ಷಣಾ ಸಚಿವರು ಕೂಡ ಸಿರಿಯಾ ಸೈನಿಕರನ್ನು ತಮ್ಮ ಪರ ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button