Breaking NewsLatestರಾಷ್ಟ್ರೀಯಸುದ್ದಿ

2022 ರಲ್ಲಿ ಗೂಗಲ್‌ ನ ಅತಿ ಹೆಚ್ಚು ಸರ್ಚ್‌ ಮಾಡಿದವರ ಪಟ್ಟಿಯಲ್ಲಿದ್ದಾರೆ ಸುಶ್ಮಿತಾ – ಲಲಿತ್‌ ಮೋದಿ

ಈ ವರ್ಷದ ಜುಲೈನಲ್ಲಿ ನಟಿ ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ಅವರು ತಮ್ಮ ನಡುವಿನ ಸಂಬಂಧದ ಬಗ್ಗೆ ಘೋಷಿಸಿದಾಗ ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಸೃಷ್ಟಿಯಾಯಿತು.

ಅವರ ಸ್ಫೋಟಕ ಟ್ವೀಟ್‌ಗಳು ಮತ್ತು ಆತ್ಮೀಯ ಚಿತ್ರಗಳು ಹೊರಹೊಮ್ಮಿದ ಬಳಿಕ ನೆಟ್ಟಿಗರು ಅವರಿಬ್ಬರ ಬಗ್ಗೆ ಗೂಗಲ್ ನಲ್ಲಿ ಸಾಕಷ್ಟು ಹುಡುಕಾಡಿದ್ದರು.

ಇದರಿಂದಲೇ ಅವರು 2022 ರಲ್ಲಿ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ಜನರಲ್ಲಿ ಸ್ಥಾನ ಪಡೆದಿದ್ದಾರೆ.

ಡಿಸೆಂಬರ್ 7 ರಂದು, ಗೂಗಲ್ ಇಯರ್ ಇನ್ ಸರ್ಚ್ 2022 ಪಟ್ಟಿಯನ್ನು ಅನಾವರಣಗೊಳಿಸಿತು. ಭಾರತದಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದವರ ಪೈಕಿ ಲಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ನೂಪುರ್ ಶರ್ಮಾ ಮೊದಲ ಸ್ಥಾನದಲ್ಲಿದ್ದರೆ, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಎರಡನೇ ಸ್ಥಾನ ಪಡೆದರು. ರಿಷಿ ಸುನಕ್, ಅಂಜಲಿ ಅರೋರಾ, ಅಬ್ದು ರೋಝಿಕ್, ಏಕನಾಥ್ ಶಿಂಧೆ, ಪ್ರವೀಣ್ ತಾಂಬೆ ಮತ್ತು ಅಂಬರ್ ಹರ್ಡ್ ಈ ಪಟ್ಟಿಯಲ್ಲಿರುವ ಇತರರು.

Spread the love

Related Articles

Leave a Reply

Your email address will not be published. Required fields are marked *

Back to top button