Breaking NewsLatestರಾಷ್ಟ್ರೀಯ

ನ್ಯಾಯಾಂಗದ ಅಧಿಕಾರಿಗಳ ಮೇಲೆ ದೇಶಾದ್ಯಂತ ಹಲ್ಲೆ; ಆತಂಕ ವ್ಯಕ್ತಪಡಿಸಿದ ಸುಪ್ರಿಂ ಕೋರ್ಟ್

ನವದೆಹಲಿ: ನ್ಯಾಯಾಂಗದ ಅಧಿಕಾರಿಗಳ ಮೇಲೆ ದೇಶಾದ್ಯಂತ ನಡೆಯುತ್ತಿರುವ ಹಲ್ಲೆಗಳ ಬಗ್ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಆತಂಕ ವ್ಯಕ್ತಪಡಿಸಿದೆ.

ಜಾರ್ಖಂಡ್​ನ ಧನ್​ಬಾದ್​ನಲ್ಲಿ ನಡೆದ ಜಡ್ಜ್ ಕೊಲೆ ಸಂಬಂಧ ವಾರದೊಳಗೆ ವರದಿ ಸಲ್ಲಿಸುವಂತೆ ಜಾರ್ಖಂಡ್​ನ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ನ್ಯಾಯಾಧೀಶರ ಕೊಲೆ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವ ಸುಪ್ರಿಂ ಕೋರ್ಟ್, ನ್ಯಾಯಾಂಗದ ಅಧಿಕಾರಿಗಳ ಮೇಲೆ ಹಲ್ಲೆ ನಡೆದಲ್ಲಿ ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಂದ ಇಂಥದೇ ವರದಿ ನಿರೀಕ್ಷಿಸುವುದಾಗಿ ಸೂಚಿಸಿತು.

ಧನ್​ಬಾದ್ ಪ್ರಕರಣದ ಪರಿಣಾಮ ವಿಪರೀತ ಮಟ್ಟದ್ದು. ನ್ಯಾಯಾಂಗದ ಅಧಿಕಾರಿಗಳ ಮೇಲೆ ದೇಶಾದ್ಯಂತ ಹಲ್ಲೆ ನಡೆಯುರುವ ಬಗ್ಗೆ ವರದಿಗಳು ಬರುತ್ತಿವೆ. ನಾವು ಇದನ್ನು ಪರಿಶೀಲಿಸಲು ಉದ್ದೇಶಿಸಿದ್ದೇವೆ ಮತ್ತು ಎಲ್ಲಾ ರಾಜ್ಯಗಳಿಂದ ಈ ಸಂಬಂಧ ವರದಿ ಕೇಳುತ್ತೇವೆ ಎಂದು ಸಿಜೆಐ ಎನ್ ವಿ ರಮಣ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button