Breaking NewsLatestರಾಷ್ಟ್ರೀಯ

ವಸಾಹತು ಕಾಲದ ದೇಶದ್ರೋಹ ಕಾನೂನು ಈಗ ಬೇಕೆ?; ಸಿಂಧುತ್ವ ಪರಿಶೀಲನೆಗೆ ಮುಂದಾದ ಸುಪ್ರೀಂ ಕೋರ್ಟ್

ನವದೆಹಲಿ: ದೇಶದ್ರೋಹ ಕಾನೂನು ವಸಾಹತುಶಾಹಿ ಕಾಲದ ಕಾನೂನು ಎಂದು ಮತ್ತೊಮ್ಮೆ ಹೇಳಿರುವ ಸುಪ್ರೀಂ ಕೋರ್ಟ್, ಸ್ವಾತಂತ್ರ್ಯ ಬಂದು 75 ವರ್ಷಗಳಾದ ಬಳಿಕವೂ ಈ ಕಾಯ್ದೆಯ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನೆತ್ತಿದೆ.

ಚೀಫ್ ಜಸ್ಟೀಸ್ ಎನ್ ವಿ ರಮಣ್ ಅವರು ಈ ಪ್ರಶ್ನೆಯನ್ನೆತ್ತಿದ್ದು, ಈ ಕಾನೂನಿನ ಸಿಂಧುತ್ವವನ್ನು ನ್ಯಾಯಾಲಯವು ಪರಿಶೀಲಿಸಲಿದೆ ಎಂದಿದ್ದಾರೆ.

ದೇಶದ್ರೋಹ ಕಾನೂನಿನ ವಿರುದ್ಧದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಈ ಮಹತ್ವದ ನಿಲುವು ಪ್ರಕಟಿಸಿದ್ದು, ಈ ಸಂಬಂಧ ಕೆಮದ್ರ ಸರ್ಕಾರಕ್ಕೆ ನೊಟೀಸ್ ನೀಡಿದೆ.

ದೇಶದ್ರೋಹ ಕಾನೂನಿನ ದುರ್ಬಳಕೆಯಾಗುತ್ತಿದೆ. ಬ್ರಿಟಿಷರು ಕೂಡ ಗಾಂಧಿಯ ಬಾಯಿ ಮುಚ್ಚಿಸಲು ಈ ಕಾಯ್ದೆಯನ್ನು ಬಳಸಿಕೊಂಡಿದ್ದರು ಎಂದು ಕೋರ್ಟ್ ಹೇಳಿದೆ.

Spread the love

Related Articles

Leave a Reply

Your email address will not be published. Required fields are marked *

Back to top button