ಭಾನುವಾರ ಬಾಡೂಟಕ್ಕೆ ಎಗ್ ಬಿರಿಯಾನಿ ರೆಸಿಪಿ: ಒಮ್ಮೆ ಟ್ರೈ ಮಾಡಿ

ಭಾನುವಾರ ಬಂದ್ರೆ ಸಾಕು ಮಾಂಸ ಪ್ರಿಯರಿಗೆ ಹಬ್ಬ. ಯಾಕಂದರೆ ಭಾನುವಾರ ಎಲ್ಲರೂ ಮನೆಯಲ್ಲೂ ಏನಾದ್ರು ಸ್ಪೆಷಲ್ ಅಡುಗೆ ಮಾಡುತ್ತಾರೆ. ಅದರಲ್ಲೂ ನಾನ್ ವೆಜ್ ಪ್ರಿಯಾರಂತು ಕೇಳಬೇಕಾ? ಆದರೆ ಮನೆಯವರಿಗೆ ಪ್ರತಿ ಭಾನುವಾರ ಏನು ಸ್ಪೆಷಲ್ ಮಾಡೋದು ಎಂಬುದೇ ಚಿಂತೆಯಾಗಿದೆ. ಪ್ರತಿವಾರ ಚಿಕನ್, ಮಟನ್ ತಿಂದು ಬೇಸರವಾಗಿರುತ್ತಾರೆ. ಇಂತಹ ಸಮಯದಲ್ಲಿ ಇಲ್ಲಿದೆ ಒಂದು ಸ್ಪೆಷಲ್ ಎಗ್ ಬಿರಿಯಾನಿ. ಹೇಗೆ ಮಾಡೋದು ಒಮ್ಮೆ ಟ್ರೈ ಮಾಡಿ.

ಬೇಕಾಗುವ ಸಾಮಾಗ್ರಿಗಳು
4-5 ಬೇಯಿಸಿದ ಮೊಟ್ಟೆ
2 ಈರುಳ್ಳಿ
1 ಟೊಮೆಟೋ
ಸ್ವಲ್ಪ ಕೊತ್ತಂಬರಿ ಸೊಪ್ಪು
ಸ್ವಲ್ಪ ಪುದೀನಾ ಎಲೆ
2 ಚಮಚ ತುಪ್ಪ
ಒಂದೂವರೆ ಚಮಚ ಎಣ್ಣೆ
ಮುಕ್ಕಾಲು ಕಪ್ ಮೊಸರು
5 ಹಸಿಮೆಣಸಿನ ಕಾಯಿ (ಚಿಕ್ಕದಾಗಿ ಕತ್ತರಿಸಿಕೊಳ್ಳಿ)
ಅರ್ಧ ಚಮಚ ಶುಂಠಿ ಪೇಸ್ಟ್
ಕೆಂಪು ಮೆಣಸಿನ ಪುಡಿ
ಕೊತ್ತಂಬರಿ ಪುಡಿ
2 ಚಮಚ ನಿಂಬೆರಸ
ರುಚಿಗೆ ತಕ್ಕಷ್ಟು ಉಪ್ಪು
4 ಲವಂಗ
1 ಚಕ್ಕೆ
2 ಚಕ್ರ ಮೊಗ್ಗು
5 ಕರಿಮೆಣಸಿನ ಕಾಳು
2 ಪಲಾವ್ ಎಲೆ
5-6 ಪುದೀನಾ ಎಲೆ
ಒಂದು ಚಮಚ ಎಣ್ಣೆ

ಮಾಡುವ ವಿಧಾನ
ಬಿರಿಯಾನಿ ಅನ್ನ ಮಾಡಲು ಬೇಕಾಗುವ ಸಾಮಾಗ್ರಿಗಳನ್ನು ಸೇರಿಸಿ ಅದಕ್ಕೆ ಕೇವಲ ಒಂದು ಚಿಟಿಕೆ ಉಪ್ಪು ಹಾಕಿ ಅನ್ನ ಮಾಡಿ ಒಂದು ಕಡೆ ಇಟ್ಟುಕೊಳ್ಳಿ. ನಂತರ ಒಂದೂವರೆ ಚಮಚ ಎಣ್ಣೆ ಮತ್ತು ಒಂದೂವರೆ ಚಮಚ ತುಪ್ಪ ಹಾಕಿ ಕಾಯಿಸಿ, ನಂತರ ಅದಕ್ಕೆ ಈರುಳ್ಳಿ ಹಾಕಿ ಚೆನ್ನಾಗಿ ಕಂದು ಬಣ್ಣ ಬರುವ ರೀತಿ ಹುರಿಯಬೇಕು.
ಹುರಿದ ಈರುಳ್ಳಿಯ ಅರ್ಧದಷ್ಟು ತೆಗೆದು ಬದಿಗಿಟ್ಟುಕೊಳ್ಳಿ. ಉಳಿದ ಅರ್ಧ ಭಾಗ ಈರುಳ್ಳಿಗೆ ಹಸಿ ಮೆಣಸಿನ ಕಾಯಿ, ಟೊಮ್ಯಾಟೋ, ಪುದೀನಾ, ಕೊತ್ತಂಬರಿ ಸೊಪ್ಪು ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ 2 ನಿಮಿಷ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಅದಕ್ಕೆ ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಬಿರಿಯಾನಿ ಮಸಾಲೆ ಪುಡಿ ಮತ್ತು ಟೊಮ್ಯಾಟೋ, ರುಚಿಗೆ ಬೇಕಾಗುವಷ್ಟು ಉಪ್ಪು ಹಾಕಿ ಟೊಮೆಟೋ ಮೃದವಾಗೋವರೆಗೂ ಬೇಯಿಸಿ.
ಈಗ ಅದಕ್ಕೆ ಮೊಸರು ಹಾಕಿ ಚೆನ್ನಾಗಿ ಬೇಯಿಸಿ, ಎಲ್ಲಾ ಪದಾರ್ಥಗಳು ಬೆಂದ ಮೇಲೆ ಅದರಲ್ಲಿ ಬೇಯಿಸಿರುವ ಮೊಟ್ಟೆಯನ್ನು ಹಾಕಿ ಬೇಯಿಸಿ. ಈಗ ಸ್ವಲ್ಪ ಅಗಲವಿರುವ ಪಾತ್ರೆ ತೆಗೆದುಕೊಂಡು ಸ್ವಲ್ಪ ಎಣ್ಣೆ ಹಾಕಿ ಅದನ್ನು ಕಾಯಿಸಿ, ಅದು ಕಾದ ನಂತರ ಸ್ವಲ್ಪ ಎಗ್ ಮಸಾಲಾ ಹಾಗೂ ಬಿರಿಯಾನಿ ಅನ್ನ ಹಾಕಿ ಒಂದು ಚಮಚ ತುಪ್ಪ ಹಾಕಿ ನಂತರ ಹುರಿದಿಟ್ಟ ಈರುಳ್ಳಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಎಲ್ಲಾ ವಸ್ತುಗಳನ್ನು ಚೆನ್ನಾಗಿ ಬೇಯಿಸಿದರೆ ಎಗ್ ಬಿರಿಯಾನಿ ಸವಿಯಲು ರೆಡಿ.
