Breaking NewsLatestರಾಷ್ಟ್ರೀಯಸುದ್ದಿ

ಹೆಸರಾಂತ ಪತ್ರಕರ್ತ ಎನ್ಡಿಟಿವಿಯ ಕಮಾಲ್ ಖಾನ್ ಇನ್ನಿಲ್ಲ

Kamal Khan ಲಖ್ನೋ:  ಹೆಸರಾಂತ ಹಿರಿಯ ಪತ್ರಕರ್ತ ಕಮಾಲ್ ಖಾನ್ (61) ತೀವ್ರ ಹೃದಯಘಾತದಿಂದ ನಿಧನರಾಗಿದ್ದಾರೆ. ಬಟ್ಲರ್ ಕಾಲೋನಿಯ ಅವರ ನಿವಾಸದಲ್ಲಿ ಅವರಿಗೆ ಶುಕ್ರವಾರ ಬೆಳಗ್ಗೆ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ. ರಾಷ್ಟ್ರಪತಿಗಳಿಂದ ರಾಮನಾಥ್ ಗೊಯೆಂಕಾ ಪ್ರಶಸ್ತಿ ಸೇರಿದಂತೆ  ಗಣೇಶ್ ಶಂಕರ್ ವಿದ್ಯಾರ್ಥಿ ಪ್ರಶಸ್ತಿಗೆ ಭಾಜನರಾಗಿದ್ದ ಕಮಾಲ್ ಖಾನ್ ಎನ್ ಡಿಟಿವಿ ಹಿಂದಿ ಸುದ್ದಿವಾಹಿತಿಯಲ್ಲಿ ಮೂರು ದಶಕದಿಂದ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ವಾಹಿನಿ ಕಾರ್ಯನಿರ್ವಾಹಕ ಸಂಪದಾಕರಲ್ಲೊಬ್ಬರಾಗಿದ್ದರು.

ಕಮಾಲ್ ಖಾನ್ ನಿಧನಕ್ಕೆ ದೇಶಾದ್ಯಂತ ಮಾಧ್ಯಮ ಬಳಗ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದೆ.  ಖಾನ್ ನಿಧನಕ್ಕೆ ಎನ್ ಡಿಟಿವಿ ಬಳಗ ತೀವ್ರ ಶೋಕ ವ್ಯಕ್ತಪಡಿಸಿದೆ.

Related Articles

Leave a Reply

Your email address will not be published. Required fields are marked *

Back to top button