Breaking NewsLatestಕ್ರಿಕೆಟ್ಕ್ರೀಡೆಸುದ್ದಿ

ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 198 ರನ್‌ ಜಯ

ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಹರಿಣಗಳು ಭರ್ಜರಿ ಪ್ರದರ್ಶನ ನೀಡಿದ್ದು, 198 ರನ್‌ಗಳಿಂದ ಜಯ ಸಾಧಿಸಿದೆ. ಇದರೊಂದಿಗೆ ಸರಣಿ 1-1ರಲ್ಲಿ ಸಮಬಲ ಸಾಧಿಸಿದೆ. ದಕ್ಷಿಣ ಆಫ್ರಿಕಾ ನ್ಯೂಜಿಲೆಂಡ್ ಗೆಲುವಿಗೆ 426 ರನ್ ಗಳ ಗುರಿ ಇತ್ತು. ಗುರಿ ಬೆನ್ನಟ್ಟಿದ ಕಿವೀಸ್ ತಂಡ ಕೇವಲ 227 ರನ್ ಗಳಿಸಲಷ್ಟೇ ಶಕ್ತವಾಯಿತು. ದಕ್ಷಿಣ ಆಫ್ರಿಕಾದ ವಿಕೆಟ್‌ ಕೀಪರ್ ಕಾರ್ಲ್ ರೆನ್ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 136 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್‌ಗೆ 354 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

89 ವರ್ಷಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಒಂದೇ ಒಂದು ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. 2022ರ ಟೆಸ್ಟ್ ಸರಣಿ ಗೆಲ್ಲಲು ಕಿವೀಸ್ ತಂಡ ಎರಡನೇ ಟೆಸ್ಟ್ ಪಂದ್ಯವನ್ನಷ್ಟೇ ಡ್ರಾ ಮಾಡಿಕೊಳ್ಳಬೇಕಿತ್ತು. ನ್ಯೂಜಿಲೆಂಡ್ ತಂಡವು 1932 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಸರಣಿಯನ್ನು ಆಡಿತ್ತು. ಇವರಿಬ್ಬರ ನಡುವೆ ಇದುವರೆಗೆ 47 ಟೆಸ್ಟ್ ಪಂದ್ಯಗಳು ನಡೆದಿದ್ದು, ಈ ಪೈಕಿ ಕಿವೀಸ್ ತಂಡ ಕೇವಲ ಐದು ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಗೆಲ್ಲಲು ಸಾಧಿಸಲು ಶಕ್ತವಾಗಿದೆ.

ನಾಲ್ಕನೇ ದಿನದಂದು, ನ್ಯೂಜಿಲೆಂಡ್‌ನ ಆರಂಭಿಕರಾದ ಟಾಮ್ ಲ್ಯಾಥಮ್ (0) ಮತ್ತು ವಿಲ್ ಯಂಗ್ (0) ಇಬ್ಬರೂ ಬೇಗನೆ ಔಟಾದರು. ಇಬ್ಬರನ್ನೂ ರಬಾಡ ಪೆವಿಲಿಯನ್‌ಗೆ ಕಳುಹಿಸಿದರು. ಇದಾದ ಬಳಿಕ ಸ್ಪಿನ್ನರ್ ಕೇಶವ್ ಮಹಾರಾಜ್ ಅವರು ಹೆನ್ರಿ ನಿಕಲ್ಸ್ (07) ಮತ್ತು ಡೇರಿಲ್ ಮಿಚೆಲ್ (24) ಅವರನ್ನು ಬೌಲ್ಡ್ ಮಾಡುವ ಮೂಲಕ ಪೆಟ್ಟು ನೀಡಿದರು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಡೆವೊನ್ ಕಾನ್ವೆ 60 ರನ್ ಗಳಿಸಿ ಆಡುತ್ತಿದ್ದರು.

ಪಂದ್ಯದ ಕೊನೆಯ ದಿನದಂದು ಕಾನ್ವೆ 92 ರನ್ ಗಳಿಸಿ ಔಟಾದರು. ಅವರನ್ನು ಹೊರತುಪಡಿಸಿ, ಟಾಮ್ ಬ್ಲಂಡಲ್ 44 ರನ್‌ಗಳ ಇನ್ನಿಂಗ್ಸ್‌ ಆಡಿದರು.

ದಕ್ಷಿಣ ಆಫ್ರಿಕಾ ಪರ ರಬಾಡ, ಯಾನ್ಸನ್ ಮತ್ತು ಮಹಾರಾಜ್ ತಲಾ ಮೂರು ವಿಕೆಟ್ ಪಡೆದರು.

Spread the love

Related Articles

Leave a Reply

Your email address will not be published. Required fields are marked *

Back to top button