Breaking NewsLatestಜಿಲ್ಲಾ ಸುದ್ದಿದಾವಣಗೆರೆ
ಕುಡಿಯಲು ಹಣ ಕೊಡದಿದ್ದಕ್ಕೆ ತಂದೆಯನ್ನೇ ಕೊಂದ ಮಗ…!

ದಾವಣಗೆರೆ: ಮದ್ಯ ಸೇವನೆ ಮಾಡಲು ಹಣ ನೀಡದಿದ್ದಕ್ಕೆ ತಂದೆಯನ್ನೇ ಪುತ್ರ ಕೊಂದು ಹಾಕಿರುವ ಘಟನೆ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ನರಸಿಂಹಪ್ಪ ಎಂಬಾತನೇ ತಂದೆಯನ್ನು ಕೊಂದ ಪಾಪಿ ಮಗ. ಮಂಜಪ್ಪ ಹತ್ಯೆಗೀಡಾದವರು.
ರಾತ್ರಿ ಮನೆಗೆ ಬಂದ ನರಸಿಂಹಪ್ಪ ಕುಡಿಯಲು ಹಣ ನೀಡುವಂತೆ ಪೀಡಿಸಿದ್ದಾನೆ. ಆಗ ತಂದೆ ತನ್ನ ಬಳಿ ಹಣ ಇಲ್ಲ. ಊಟ ಮಾಡಿ ಮಲಗು ಎಂದಿದ್ದಾರೆ. ಆಗ ಇದರಿಂದ ರೊಚ್ಚಿಗೆದ್ದ ನರಸಿಂಹಪ್ಪ ಕುಪಿತಗೊಂಡು ತಂದೆಯನ್ನು ಎಳೆದಾಡಿ ಕೆಳಕ್ಕೆ ಬೀಳಿಸಿದ್ದಾನೆ. ಅವರ ಎದೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಇದರಿಂದಾಗಿ ತೀವ್ರವಾಗಿ ಗಾಯಗೊಂಡ ಮಂಜಪ್ಪ ಮೃತಪಟ್ಟಿರುವುದಾಗಿ ಮಂಜಪ್ಪನ ಪತ್ನಿ ದೂರು ನೀಡಿದ್ದಾರೆ ಎಂದು ಸಿಪಿಐ ದೇವರಾಜ್ ತಿಳಿಸಿದ್ದಾರೆ. ಸ್ಥಳಕ್ಕೆ ಪಿಎಸ್ಐ ಬಸವರಾಜ್ ಬಿರಾದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ನರಸಿಂಹಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
