Breaking NewsLatestರಾಜ್ಯಸುದ್ದಿ

ಕಾಂತಾರ ನೋಡಿ ರಿಷಬ್ ಭೇಟಿಯಾದ ಸಿದ್ಧಾಂತ್!

ಗೆಹರಾಯಿಯಾ ಸಿನಿಮಾ ಹೀರೋ ಸಿದ್ದಾಂತ್ ಚತುರ್ವೇದಿ ಅವರು ಇತ್ತೀಚೆಗೆ ಕಾಂತಾರ ಸಿನಿಮಾ ನೋಡಿದ್ದಾರೆ. ಸಿನಿಮಾ ವೀಕ್ಷಿಸಿದ ನಂತರ ‘ಕಾಂತಾರ’ ಚಿತ್ರಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.ನಟ ನಿರ್ದೇಶಕ-ನಟ ರಿಷಬ್ ಶೆಟ್ಟಿ ಅವರನ್ನು ‘ಮಾಸ್ಟರ್’ ಎಂದು ಕರೆದು ಹೊಗಳಿದ ಬಾಲಿವುಡ್ ನಟ ಸ್ಪೂರ್ತಿದಾಯಕ ಸಿನಿಮಾ ಕೊಟ್ಟಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನಟ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಶೇರ್ ಮಾಡಿಕೊಂಡು ರಿಷಬ್ ಅವರೊಂದಿಗಿನ ಭೇಟಿಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ವಿಡಿಯೋ ಜೊತೆ ಕ್ಯಾಪ್ಶನ್ ಬರೆದ ನಟ ಕಾಂತಾರಕ್ಕೆ ನನ್ನ ಮೆಚ್ಚುಗೆ ಪೋಸ್ಟ್ ತುಂಬಾ ತಡವಾಯಿತು. ನಾನು ನಿನ್ನೆ ರಾತ್ರಿ ಸಿನಿಮಾ ನೋಡಿದೆ. ರಿಷಬ್ ಶೆಟ್ಟಿ ನೀವು ಮಾಸ್ಟರ್. ಇದೊಂದು ಮೇರುಕೃತಿ! ಚಿತ್ರದಲ್ಲಿ ಆಳವಾಗಿ ಬೇರೂರಿರುವ ಸಾಂಸ್ಕೃತಿಕ ಸಾರವು ನನ್ನನ್ನು ಪ್ರೇರೇಪಿಸಿತು. ಅದು ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತದೆ. ಈ ಸ್ಪೂರ್ತಿದಾಯಕ ಸಿನಿಮಾದ ಕೊಟ್ಟಿದ್ದಕ್ಕೆ ಧನ್ಯವಾದಗಳು. ಧನ್ಯವಾದಗಳು ಎಂದು ಬರೆದಿದ್ದಾರೆ ನಟ.

ರಿಷಬ್ ಶೆಟ್ಟಿಯಲ್ಲದೆ, ‘ಕಾಂತಾರ’ ಸಿನಿಮಾದಲ್ಲಿ ಕಿಶೋರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಅಕ್ಟೋಬರ್ 14 ರಂದು ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಿದೆ. ಪ್ರಭಾಸ್, ಧನುಷ್, ಅನುಷ್ಕಾ ಶೆಟ್ಟಿ, ಮತ್ತು ಶಿಲ್ಪಾ ಶೆಟ್ಟಿ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಈಗಾಗಲೇ ಚಿತ್ರವನ್ನು ಹೊಗಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button