Breaking NewsLatestಕ್ರೈಂಜಿಲ್ಲಾ ಸುದ್ದಿರಾಜ್ಯಶಿವಮೊಗ್ಗಸುದ್ದಿ

Shivamogga Murder: ಹರ್ಷನ ಹತ್ಯೆಗೆ ನ್ಯಾಯ ಕೊಡಿಸಿ: ಸೋದರಿ ಅಶ್ವಿನಿ ಅಳಲು

ಶಿವಮೊಗ್ಗ: ಸಹೋದರ ಹರ್ಷನನ್ನು ಹತ್ಯೆ ಮಾಡಿದ್ದು ಯಾರು ಎನ್ನುವುದು ಗೊತ್ತಿಲ್ಲ. ಆದರೆ ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದು ಹತ್ಯೆಗೀಡಾದ ಹರ್ಷನ ಸಹೋದರಿ ಅಶ್ವಿನಿ ಅಳಲು ತೋಡಿಕೊಂಡಿದ್ದಾರೆ.

ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಿನಿ ಅವರು, ನಾನು ಚಿಕ್ಕಮಗಳೂರಿನಲ್ಲಿ ಇದ್ದೆ. ಫೋನ್ ಮಾಡಿ ನಿನ್ನ ತಮ್ಮನನ್ನು ಹೊಡೆದು ಹಾಕಿದ್ದಾರೆ. ವಾಟ್ಸಾಪ್ ನಲ್ಲಿ ವಿಡಿಯೋ, ಫೋಟೊ ಕಳುಹಿಸಿದ್ದರು. ಈಗ ನಾವು ಯಾರ ಬಳಿ ನ್ಯಾಯ ಕೇಳೋಣ ಎಂದು ಅಳಲು ತೋಡಿಕೊಂಡರು.

ಸೋದರ ಹರ್ಷ ಯಾರಿಗೂ ತೊಂದರೆ ಮಾಡಿದವನಲ್ಲ. ಜೈಶ್ರೀರಾಮ ಅಂದುಕೊಂಡೆ ಹೋದ. ಹತ್ಯೆ ಮಾಡಿದವರು ಯಾರು ಅನ್ನುವುದು ನಮಗೆ ಗೊತ್ತಿಲ್ಲ. ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದ ಅವರು, ಹರ್ಷ ಹಿಂದೂ ಎಂದು ಹೆಸರಿಟ್ಟುಕೊಂಡಿದ್ದೆ ತಪ್ಪಾ ಎಂದು ಪ್ರಶ್ನಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹರ್ಷ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಈ ಸಂದರ್ಭ ತಮ್ಮ ಸಹೋದರನ ಸಾವಿಗೆ ನ್ಯಾಯ ಕೊಡಿಸುವಂತೆ ಅಶ್ವಿನಿ ಅವರು ಮನವಿ ಮಾಡಿದರು. ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದರು.

Spread the love

Related Articles

Leave a Reply

Your email address will not be published. Required fields are marked *

Back to top button