ಹಿರಿಯ ಸಾಹಿತಿ ಚೆನ್ನವೀರ ಕಣವಿ ಆರೋಗ್ಯ ಸ್ಥಿತಿ ಗಂಭೀರ : ವೆಂಟಿಲೇಟರ್ ಮೂಲಕ ಮುಂದುವರೆದ ಚಿಕಿತ್ಸೆ

ಧಾರವಾಡ: ಕಳೆದ ಜ.14 ರಂದು ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಸಾಹಿತಿ ಚೆನ್ನವೀರ ಕಣವಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ಮುಂದುವರೆಸಲಾಗಿದೆ.
ನಗರದ ಸತ್ತೂರು ಬಳಿಯ ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಹಿರಿಯ ಸಾಹಿತಿ ಚೆನ್ನವೀರ ಕಣವಿ ಆರೋಗ್ಯ ಸ್ಥಿತಿಯ ಕುರಿತು, ಎಸ್ಡಿಎಂ ವೈದ್ಯರು ಹೆಲ್ತ್ ಬುಲೆಟಿನ್ ಮೂಲಕ ಮಾಹಿತಿ ನೀಡಿದ್ದಾರೆ. ಸದ್ಯ ಹಿರಿಯ ಸಾಹಿತಿಗಳ ಆರೋಗ್ಯವು ಗಂಭೀರವಾಗಿದೆ. ಅವರಿಗೆ ವೆಂಟಿಲೇಟರ್ ಮೂಲಕಚಿಕಿತ್ಸೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.
ಚೆನ್ನವೀರ ಕಣವಿಯರಿಗೆ ಎಲ್ಲ ಚಿಕಿತ್ಸೆಯನ್ನು ವೆಂಟಿಲೇಟರತ ಮೂಲಕವೇ ಮುಂದುವರೆಸಲಾಗುತ್ತಿದ್ದು, ರಕ್ತದೊತ್ತಡ ಸಹಜ ಸ್ಥಿತಿಗೆ ಬಂದಿದೆ. ಕಿಡ್ನಿ ಕಾರ್ಯದಲ್ಲಿ ಕೊಂಚ ಸುಧಾರಣೆ ಕಂಡು ಬಂದಿದ್ದು, ಶ್ವಾಸಕೋಶದಲ್ಲಿ ಸೋಂಕು ಮತ್ತೆಯಾಗಿದೆ. ಹಾಗಾಗಿ ಪ್ರೊಟೊಕಾಲ್ ಪ್ರಕಾರ ಅವರಿಗೆ ಈಗ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಕಳೆದ ಜ.14ರಂದು ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿದಾಗ, ಹಿರಿಯ ಸಾಹಿತಿಗಳಿಗೆ ಎರಡು ದಿನದನಂತರ ಕೊರೊನಾ ಸೋಂಕು ದೃಢಪಟ್ಟಿತ್ತು. ಅಂದಿನಿಂದ ಇಂದಿನವರೆಗೂ ಚಚೆನ್ನವೀರ ಕಣವಿಯವರಿಗೆ ಎಸ್ಡಿಎಂ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
