Breaking NewsLatestಜಿಲ್ಲಾ ಸುದ್ದಿಮೈಸೂರುಸುದ್ದಿ

ಶಕ್ತಿಧಾಮದ ಮಕ್ಕಳಿಗೆ ಬಾಡೂಟ ಬಡಿಸಿದ ನಟ ಶಿವರಾಜ್ ಕುಮಾರ್

ಮೈಸೂರು: ನಟ ಶಿವರಾಜ್​ ಕುಮಾರ್​ ಅಭಿನಯದ ಚಿತ್ರದ ಶೂಟಿಂಗ್​ ಮೈಸೂರಿನಲ್ಲಿ ನಡೆಯುತ್ತಿದೆ. ಆದರೂ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದರೂ ಕೆಲಸದ ನಡುವೆ ನಟ ಶಿವಣ್ಣ ಶಕ್ತಿಧಾಮಕ್ಕೆ ಭೇಟಿ ನೀಡಿ ಮಕ್ಕಳಿಗೆ ಬಾಡೂಟ ಬಡಿಸಿದ್ದಾರೆ.

ಮೈಸೂರಿನ ದೊನ್ನೆ ಬಿರಿಯಾನಿ ಪ್ಯಾಲೇಸ್ ವತಿಯಿಂದ ಸಚಿನ್ ಗೌಡ ಎನ್ನುವವರು ಶಕ್ತಿಧಾಮದ ಮಕ್ಕಳಿಗೆ ಬಿರಿಯಾನಿ ಹಾಗೂ ಕಬಾಬ್​ ಊಟ ಹಂಚಿದ್ದಾರೆ. ಈ ವೇಳೆ ಶಿವಣ್ಣ ಹಾಗೂ ಗೀತಾ ಶಿವರಾಜ್​ ಕುಮಾರ್​ ಅವರು ಸ್ವತಃ ತಮ್ಮ ಕೈಯಾರೆ ಮಕ್ಕಳಿಗೆ ಊಟ ಬಿಡಿಸಿ ಖುಷಿ ಪಟ್ಟಿದ್ದಾರೆ.

ಇನ್ನು ಶಿವಣ್ಣ ಈ ಬಾರಿಯ ಗಣರಾಜ್ಯೋತ್ಸವವನ್ನು ಸಹ ಶಕ್ತಿಧಾಮದಲ್ಲೇ ಆಚರಿಸಿದ್ದರು. ಅಲ್ಲದೇ ಶಕ್ತಿಧಾಮದ ಮಿನಿಬಸ್​ಗೆ ತಾವೇ ಡ್ರೈವರ್​ ಆಗಿ ಮಕ್ಕಳ ಜೊತೆ ಜಾಲಿರೈಡ್​ ಮಾಡಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button