Breaking NewsLatestಮೆಟ್ರೋರಾಜ್ಯರಾಷ್ಟ್ರೀಯವಿದೇಶಸುದ್ದಿ

ಉಕ್ರೇನ್ ನೆರೆಯ ರಾಷ್ಟ್ರಗಳಿಗೆ ಸುರಕ್ಷತೆ ಹುಡಕಿ ಬರುತ್ತಿರುವ ಲಕ್ಷಾಂತರ ನಿರಾಶ್ರಿತರು

ನವದೆಹಲಿ: ರಷ್ಯಾ-ಉಕ್ರೇನ್ ನಡುವಿನ ಬಿಕ್ಕಟ್ಟು ತೀವ್ರಗೊಂಡಂತೆ, ಪೊಲೆಂಡ್, ರೊಮೇನಿಯಾ, ಹಂಗೇರಿ, ಮೊಲ್ಡೊವಾ ಮತ್ತು ಸ್ಲೋವಾಕಿಯಾದ ಗಡಿ ರಾಷ್ಟ್ರಗಳಲ್ಲಿ ಸಾವಿರಾರು ಮಂದಿ ಸುರಕ್ಷತೆಯನ್ನು ಹುಡುಕಿಕೊಂಡು ಗುಳೆ ಬಂದಿದ್ದಾರೆ. ಈ ದೇಶಗಳ ಗಡಿಯಲ್ಲಿರುವ ಚೆಕ್ ಪೋಸ್ಟ್ ಗಳಲ್ಲಿ ಕಾರು, ಬಸ್ಸು ಇತ್ಯಾದಿ ವಾಹನಗಳು ಭಾರಿ ಸಂಖ್ಯೆಯಲ್ಲಿ ಜಮಾವಣೆಗೊಂಡಿವೆ.

ಈ ಯುದ್ಧವು ಸರಿ ಸುಮಾರು 4 ದಶಲಕ್ಷ ಜನರನ್ನು ನಿರಾಶ್ರಿತರನ್ನಾಗಿ ಮಾಡಬಹುದು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. 5.20 ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರು ಉಕ್ರೇನ್ ನಿಂದ ಪಲಾಯನ ಮಾಡಿದ್ದಾರೆ ಎಂದು ನಿರಾಶ್ರಿತರ ಹೈ ಕಮೀಷ್ನರ್ ಫಿಲಿಪ್ಪೋ ಗ್ರಾಂಡಿ ತಿಳಿಸಿದ್ಧಾರೆ.

ಪೊಲೆಂಡ್ ನಲ್ಲಿ 2.8 ಲಕ್ಷಕ್ಕಿಂತ ಅಧಿಕ ಜನರ ಆಗಮನವನ್ನು ವರದಿ ಮಾಡಿದೆ. ರೈಲುಗಳು ಗಡಿ ಸಮೀಪದ ಪಟ್ಟಣವಾದ ಪ್ರಜೆಮಿಸ್ಲ್ ಗೆ ನಿರಾಶ್ರಿತರನ್ನು ಕರೆ ತರುವುದನ್ನು ಮುಂದುವರಿಸಿದವು. ಪೋಲಿಷ್ ನ ವಿಶ್ವಸಂಸ್ಥೆ ರಾಯಭಾರಿ ಕ್ರಿಸ್ಜ್ಟೋಫ್ ಸ್ಜೆರ್ಸ್ಕೀ, ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತ, ಉಕ್ರೇನಿಯನ್ನರ ಜತೆಗೆ, ಸೋಮವಾರ ಬಂದವರಲ್ಲಿ ಸರಿ ಸುಮಾರು 125 ರಾಷ್ಟ್ರೀಯತೆಗಳ ಜನರು ಸೇರಿದ್ದಾರೆ ಎಂದು ತಿಳಿಸಿದ್ದಾರೆ.

ಸೋಮವಾರ ಮುಂಜಾನೆ ಉಕ್ರೇನ್ ನಿಂದ 1800 ನಿರಾಶ್ರಿತರು ಆಗಮಿಸಿದ್ದಾರೆ ಮತ್ತು ಪೋಲೆಂಡ್ ನಿಂದ ಹೆಚ್ಚಿನ ರೈಲುಗಳು ಆಗಮಿಸುತ್ತಿರುವುದರಿಂದ ಸಂಖ್ಯೆ ನಿರಂತರವಾಗಿ ಬೆಳೆಯುತ್ತಿದೆ ಎಂದು ಜರ್ಮನಿಯ ಆಂತರಿಕ ಸಚಿವಾಲಯ ತಿಳಿಸಿದೆ. ಸಾವಿರಾರು ನಿರಾಶ್ರಿತರು ಗಡಿ ದಾಟುವ ಸಿರೆಟ್ ಪಟ್ಟಣದ ಮೂಲಕ ರೋಮೇನಿಯಾ ಪ್ರವೇಶಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button