
ನವದೆಹಲಿ: ಯುದ್ದಪೀಡಿತ ಉಕ್ರೇನ್ ನಿಂದ ಆಪರೇಷನ್ ಗಂಗಾ ಅಡಿಯಲ್ಲಿ ಭಾರತೀಯರನ್ನು ಸ್ಥಳಾಂತರಿಸಲು 4ನೇ ವಿಮಾನವು ಬುಕಾರೆಸ್ಟ್ ನಿಂದ ದೆಹಲಿಗೆ ಹೊರಟಿದೆ. ಎಂದು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಉಕ್ರೇನ್ ನಿಂದ ಭಾರತೀಯರ ಸ್ಥಳಾಂತರಿಸುವವರೊಂದಿಗಿನ ನಾಲ್ಕನೇ ಆಪರೇಷನ್ ಗಂಗಾ ವಿಮಾನವು ಬುಕಾರೆಸ್ಟ್ ನಿಂದ ದೆಹಲಿಗೆ ಹೊರಟಿದೆ. 198 ಭಾರತೀಯರು ಸ್ವದೇಶದಕ್ಕೆ ಮರಳುತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದಕ್ಕೂ ಮೊದಲು ಬುಡಾಪೆಸ್ಟ್ ನಿಂದ 240 ಭಾರತೀಯ ಪ್ರಜೆಗಳೊಂದಿಗೆ ಆಪರೇಷನ್ ಗಂಗಾ ಮೂರನೇ ವಿಮಾನವು ಭಾನುವಾರ ಬೆಳಗ್ಗೆ ದೆಹಲಿಗೆ ಬಂದಿಳಿಯಿತು. ಉಕ್ರೇನ್ ನಲ್ಲಿರುವ ಭಾರತೀಯರ ಒಂದು ಬ್ಯಾಚ್ ಉಕ್ರೇನ್-ಹಂಗೇರಿ ಗಡಿಯನ್ನು ತಲುಪಿತು ಮತ್ತು ನಂತರ ವಿಮಾನವನ್ನು ಹತ್ತಲು ಬುಡಾಪೆಸ್ಟ್ ಗೆ ಬಂದಿತು.
ನಾಗರಿಕ ವಿಮಾನ ಕಾರ್ಯಾಚರಣೆಗಳಿಗಾಗಿ ಉಕ್ರೇನಿಯನ್ ವಾಯು ಪ್ರದೇಶವನ್ನು ಮುಚ್ಚಲಾಗಿದೆ ಮತ್ತು ಭಾರತೀಯರನ್ನು ಸ್ಥಳಾಂತರಿಸುವ ವಿಮಾನಗಳು ರುಮೇನಿಯನ್ ಕ್ಯಾಪಿಟಲ್ ಬುಕಾರೆಸ್ಟ್ ಮತ್ತು ಹಂಗೇರಿಯನ್ ಕ್ಯಾಪಿಟಲ್ ಬುಡಾಪೆಸ್ಟ್ ನಿಂದ ಕಾರ್ಯನಿರ್ವಹಿಸುತ್ತಿವೆ.
