Breaking NewsLatestಚಿಕ್ಕಮಗಳೂರುಜಿಲ್ಲಾ ಸುದ್ದಿ

ಉಕ್ರೇನ್ ದೇಶದಲ್ಲಿ ಚಿಕ್ಕಮಗಳೂರಿನ ಆರು ವಿದ್ಯಾರ್ಥಿಗಳು: ಪೋಷಕರಿಗೆ ಆತಂಕ

ಚಿಕ್ಕಮಗಳೂರು: ಜಗತ್ತನ್ನು ತಲ್ಲಣಗೊಳಿಸುವಂತೆ ಉಕ್ರೇನ್-ರಷ್ಯಾ ನಡುವೆ ಯುದ್ಧ ನಡೆಯುತ್ತಿದ್ದು, ಉಕ್ರೇನ್ ದೇಶದಲ್ಲಿ 6 ಮಂದಿ ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿಗಳು ನೆಲೆಸಿದ್ದು, ಪೋಷಕರು ಆತಂಕಕ್ಕೊಳಗಾಗಿದ್ದಾರೆ.

ಉಕ್ರೇನ್​​​ನ ಖಾರ್ಕಿವ್ ನಗರದ ಖಾರ್ಕಿವ್ ಇಂಟರ್ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಹೊಸಳ್ಳಿ ಇಂದ್ರೇಶ್ ಎಂಬವರ ಪುತ್ರ ಪ್ರದ್ವಿನ್, ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಸಮೀಪದ ಉಡಿಗರಹಳ್ಳಿಯಲ್ಲಿ ಎಚ್.ಕೆ.ಮನೋಜ್ ಎಂಬವರು ಉಕ್ರೇನ್​​​ನಲ್ಲಿ ಸಿಲುಕಿದ್ದಾರೆ.

ಇವರಿಬ್ಬರು ವಿದ್ಯಾರ್ಥಿಗಳ ಸಹಿತ ಜಿಲ್ಲೆಯ ಆರು ವಿದ್ಯಾರ್ಥಿಗಳು ಉಕ್ರೇನ್ ದೇಶದಲ್ಲಿ ಸಿಲುಕಿಕೊಂಡಿದ್ದು ಕೆಲವರು ಸಂಪರ್ಕಕ್ಕೆ ಸಿಗುತ್ತಿದ್ದಾರೆ. ಇನ್ನೂ ಕೆಲವರು ಸಂಪರ್ಕಕ್ಕೆ ಸಿಕ್ಕಿಲ್ಲ. ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಪ್ರಯತ್ನ ನಡೆಸುತ್ತಿದ್ದು, ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವಂತೆ ಪೋಷಕರುನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button