Breaking NewsLatestರಾಜ್ಯರಾಷ್ಟ್ರೀಯವಿದೇಶಸುದ್ದಿ

ರಷ್ಯಾ ವಿರುದ್ಧ ಹೋರಾಡುವ ಯಾವುದೇ ಉದ್ದೇಶ ಅಮೆರಿಕಾಕ್ಕೆ ಇಲ್ಲ: ಬಿಡೆನ್ ಪುನರುಚ್ಚಾರ

Russia-Ukraine Conflict: ವಾಷಿಂಗ್ಟನ್: ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ವಿರುದ್ಧ ಸೆಣಸಲು ಅಮೇರಿಕಾ ತನ್ನ ಮಿಲಿಟರಿ ಪಡೆಗಳನ್ನು ಕಳುಹಿಸುವುದಿಲ್ಲ ಎಂದು ಅಧ್ಯಕ್ಷ ಜೋಬಿಡೆನ್  ಪುನರುಚ್ಚರಿಸಿದ್ದಾರೆ. ನಮ್ಮ ಪಡೆಗಳು ಉಕ್ರೆನ್ ನಲ್ಲಿ ರಷ್ಯಾದೊಂದಿಗೆ ಸಂಘರ್ಷದಲ್ಲಿ ತೊಡಗಿಲ್ಲ ಮತ್ತು ತೊಡಗಿಸಿಕೊಳ್ಳುವುದಿಲ್ಲ ಎಂದು ಅವರು ಶ್ವೇತಭನವದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಮೇರಿಕನ್ ಮಿಲಿಟರಿ ಪಡೆಗಳು ಉಕ್ರೇನ್‌ನಲ್ಲಿ ನೇರ ಸಂಘರ್ಷದಿಂದ ಹೊರಗುಳಿದಿರುವಾಗ, ಮಿತ್ರರಾಷ್ಟ್ರಗಳನ್ನು ರಕ್ಷಿಸಲು ಯುಎಸ್ ಪಡೆಗಳು ರಷ್ಯಾದ ಗಡಿಯಲ್ಲಿ ನೆಲೆಗೊಂಡಿರುವುದು ಗಮನಾರ್ಹವಾಗಿದೆ.

ನಮ್ಮ ಪಡೆಗಳು ಉಕ್ರೇನ್ ನಲ್ಲಿ ಹೋರಾಡಲು ಯುರೋಪಿಗೆ ಹೋಗುತ್ತಿಲ್ಲ. ಆದರೆ ನ್ಯಾಟೋ ಮಿತ್ರರಾಷ್ಟ್ರಗಳನ್ನು ರಕ್ಷಿಸಲು ಮತ್ತು ಪೂರ್ವದಲ್ಲಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತವೆ ಎಂದು ಹೇಳಿದರು.  ನಮಗೆ ರಷ್ಯಾದ ವಿರುದ್ಧ ಹೋರಾಡುವ ಯಾವುದೇ ಉದ್ದೇಶವಿಲ್ಲ ಎಂದು ಬಿಡೆನ್ ಹಿಂದಿನ ದಿನವಷ್ಟೆ ಸ್ಪಷ್ಟಪಡಿಸಿದ್ದರು. ನಾವು ಸಂದೇಶ ಕಳುಹಿಸಲು ಬಯಸುತ್ತೇವೆ. ನಮ್ಮ ಮಿತ್ರರಾಷ್ಟ್ರಗಳೊಂದಿಗೆ ನ್ಯಾಟೊ ಪ್ರದೇಶದ ಪ್ರತಿ ಇಂಚಿನ್ನೂ ರಕ್ಷಿಸುತ್ತದೆ ಎಂದರು.

ಎಸ್ಟೋನಿಯಾ, ಲಾಟ್ವಿಯಾ ಮತ್ತು ಲಿಧುವೇನಿಯಾ ಸೇರಿದಂತೆ ರಷ್ಯಾದ ಗಡಿ ಉದ್ದಕ್ಕೂ ನ್ಯಾಟೋ ಸಂಯೋಜಿತ ದೇಶಗಳಿಗೆ ಈಗಾಗಲೇ ಯುರೋಪಿನ ಇತರ ಭಾಗಗಳಲ್ಲಿ ನೆಲೆಸಿರುವ ಅಮೆರಿಕಾ ಪಡೆಗಳನ್ನು ಸ್ಥಳಾಂತರಿಸಲು ಬಿಡೆನ್ ಆದೇಶಿಸಿದ್ದಾರೆ.

ನಮ್ಮ ನ್ಯಾಟೋ ಮಿತ್ರರಾಷ್ಟ್ರಗಳಿಗೆ ಧೈರ್ಯ ತುಂಬಲು, ನ್ಯಾಟೋ ಸದಸ್ಯ ರಾಷ್ಟ್ರಗಳ ವಿರುದ್ಧ ಯಾವುದೇ ಸಂಭಾವ್ಯ ಆಕ್ರಮಣವನ್ನು ತಡೆಯಲು ಮತ್ತು ಆತಿಥೇಯ ರಾಷ್ಟ್ರದ ಪಡೆಗಳೊಂದಿಗೆ ತರಬೇತಿ ನೀಡಲು ಹೆಚ್ಚುವರಿ ಸಿಬ್ಬಂದಿಯನ್ನು ಮರು ಸ್ಥಾಪಿಸಲಾಗುತ್ತಿದೆ. ಈ ಕ್ರಮಗಳು ತಾತ್ಕಾಲಿಕ ಎಂದು ಮಂಗಳವಾರ ನಡೆದ ಸಮ್ಮೇಳನದಲ್ಲಿ ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ ತಿಳಿಸಿದ್ದರು.

ಏನಿದು ನ್ಯಾಟೋ?

ನ್ಯಾಟೋ ಎಂಬುದು ಉತ್ತರ ಅಮೆರಿಕಾ ಮತ್ತು ಯುರೋಪಿನಾದ್ಯಂತ 30 ದೇಶಗಳ ನಡುವಿನ ಮೈತ್ರಿ. ರಾಜಕೀಯ ಮತ್ತು ಮಿಲಿಟರಿ ವಿಧಾನಗಳ ಮೂಲಕ ಭದ್ರತೆಯನ್ನು ಸರಕ್ಷಿಸುವುದು ಇದರ ಉದ್ದೇಶ. ಎರಡನೇ ಮಹಾಯುದ್ಧದ ನಂತರ ಮಿತ್ರರಾಷ್ಟ್ರಗಳೊಂದಿಗೆ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ವಿವಾದಗಳ ಶಾಂತಿಯುವ ಪರಿಹಾರದ ಮೇಲೆ ಇದರ ಗಮನ ಕೇಂದ್ರಿಕರಿಸಿರುತ್ತದೆ.

ಇಂದು ಬೆಳಗ್ಗೆ ಬಲ್ಗೇರಿಯಾ, ಜೆಕ್ ರಿಪಬ್ಲಿಕ್, ಪೋಲೆಂಡ್, ಎಸ್ಟೋನಿಯಾ, ಲಾಟ್ವಿಯಾ ಮತ್ತು ಲಿಥುವೇನಿಯಾ ಸೇರಿದಂತೆ ನ್ಯಾಟೋದ ಪೂರ್ವ ರಾಷ್ಟ್ರಗಳ ಒಕ್ಕೂಟವು ತನ್ನ ಒಪ್ಪಂದದ ಆರ್ಟಿಕಲ್ 4ರ ಅಡಿಯಲ್ಲಿ ಸಮಾಲೋಚನೆಗಳನ್ನು ಪ್ರಾರಂಭಿಸಿತು. ಪ್ರಾದೇಶಿಕ ಸಮಗ್ರತೆ, ರಾಜಕೀಯ ಸ್ವಾತಂತ್ರ್ಯ ಅಥವಾ ಭದ್ರತೆ ಇದಕ್ಕೆ ಆಧಾರವಾಗಿತ್ತು.

ಆರ್ಟಿಕಲ್ 5ರ ಅಡಿಯಲ್ಲಿ ನ್ಯಾಟೋ ತನ್ನ ಸಾಮೂಹಿಕ ರಕ್ಷಣಾ ಜವಾಬ್ದಾರಿಗಳನ್ನು ಪೂರೈಸಲು ಸಿದ್ದವಾಗಿದೆ ಎಂದು ಬಿಡೆನ್ ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿದಿರು. ಅಮೆರಿಕಾ ಮತ್ತು ಪ್ರತಿ ನ್ಯಾಟೋ ಮಿತ್ರರಾಷ್ಟ್ರಗಳು ಆರ್ಟಿಲ್ 5 ರ ಬದ್ಧತೆಯನ್ನು ಪೂರೈಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಅದು ಒಬ್ಬರ ಮೇಲಿನ ದಾಳಿಯು ಆಕ್ರಮಣ ಎಂದು ಹೇಳುತ್ತದೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button