ಫೇಸ್ ಬುಕ್, ಟ್ವಿಟರ್ ಆಯ್ತು ಇದೀಗ ಇನ್ ಸ್ಟಾಗ್ರಾಮ್ ಬ್ಯಾನ್ ಮಾಡಿದ ರಷ್ಯಾ

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ತನ್ನ ದೇಶದಲ್ಲಿ ಸೋಮವಾರದಿಂದ ಇನ್‌ಸ್ಟಾಗ್ರಾಂ ಅನ್ನು ಬ್ಯಾನ್ ಮಾಡುತ್ತಿದ್ದು ಈ ಕುರಿತು ಆದೇಶ ಹೊರಡಿಸಿದೆ. ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂ ರಷ್ಯಾದ ಜನರ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎಂಬ ಆರೋಪ ಹೊರಿಸಿರುವ ರಷ್ಯಾ ಇನ್ ಸ್ಟಾಗ್ರಾಂ ಅನ್ನು ಬ್ಯಾನ್ ಮಾಡುತ್ತಿದೆ.
ಉಕ್ರೇನ್ ಮೇಲೆ ದಾಳಿ ಮಾಡಿರುವ ರಷ್ಯಾದ ಜನರನ್ನ ಕೊಲ್ಲಿ ಎಂಬ ಪೋಸ್ಟ್ ಗಳಲ್ಲಿ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಫೋಸ್ಟ್ ಮಾಡಲಾಗುತ್ತಿದೆ. ರಷ್ಯಾದ ಸೈನ್ಯದ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡುವ ಪೋಸ್ಟ್ ಗಳನ್ನ ಇನ್ ಸ್ಟಾಗ್ರಾಮ್ ನಲ್ಲಿ ಪ್ರಚಾರ ಮಾಡಲಾಗುತ್ತಿದ್ದು ಇದೇ ಕಾರಣಕ್ಕೆ ಇನ್ ಸ್ಟಾಗ್ರಾಮ್ ಅನ್ನು ಬ್ಯಾನ್ ಮಾಡುತ್ತಿರುವುದಾಗಿ ರಷ್ಯಾದ ತನಿಖಾ ಸಂಸ್ಥೆ ಹೇಳಿದೆ. ಜೊತೆಗೆ ಇನ್ ಸ್ಟಾಗ್ರಾಮ್ ನ ಮೂಲ ಸಂಸ್ಥೆಯಾದ ಮೆಟಾ ವಿರುದ್ಧ ದೂರು ದಾಖಲಿಸಿಕೊಂಡಿರುವ ರಷ್ಯಾ ತನಿಖಾ ಸಂಸ್ಥೆಗೆ ತನಿಖೆ ಮಾಡಲು ತಿಳಿಸಿದೆ.
ರಷ್ಯಾದ ಮಾಸ್ಕೋನಲ್ಲಿ ಮೆಟಾ ಒಡೆತನದ ಫೇಸ್ ಬುಕ್ ಈಗಾಗಲೇ ಬ್ಯಾನ್ ಮಾಡಲಾಗಿದೆ. ಜೊತೆಗೆ ಟ್ವಿಟ್ಟರ್ ಮೇಲೆಯೂ ಸಾಕಷ್ಟು ನಿರ್ಬಂಧಗಳನ್ನ ಹೇರಲಾಗಿದೆ. ಇದೀಗ ರಷ್ಯಾದ 80% ಜನಸಂಖ್ಯೆ ಇನ್ ಸ್ಟಾಗ್ರಾಂ ಬಳಸುತ್ತಿದ್ದು ಸೋಮವಾರದಿಂದ ಅದು ಕೂಡ ಬ್ಯಾನ್ ಆಗಿಲಿದೆ. ಈ ಮೂಲಕ ರಷ್ಯಾ ನಾಗರಿಕರು ಹೊರ ಜಗತ್ತಿನೊಂದಿಗೆ ಹೊಂದಿರುವ ಸಾಮಾಜಿಕ ಜಾಲತಾಣದ ಎಲ್ಲಾ ಸಂಪರ್ಕವನ್ನ ರಷ್ಯಾ ಕಡಿತಗೊಳಿಸುತ್ತಿದೆ.
