ಮಾಸ್ಕೋ: ಉಕ್ರೇನ್ ಜತೆ 2ನೇ ಸುತ್ತಿನ ಮಾತುಕತೆ ನಡೆಸಲು ರಷ್ಯಾ ಸಿದ್ದವಾಗಿದೆ. ಬುಧವಾರ ಸಂಜೆ ರಷ್ಯಾ ನಿಯೋಗ ಮಾತುಕತೆ ನಡೆಸಲು ಸಿದ್ದವಿದೆ ಎಂದು ಅಧ್ಯಕ್ಷ ಕ್ರಮ್ಲಿನ್ ವಕ್ತಾರ ಮಿತ್ರಿ ಪೆಸ್ಕೊವ್ ತಿಳಿಸಿದ್ದಾರೆ. ಇದಕ್ಕೂ ಮುನ್ನ ಯುದ್ಧವಿರಾಮ ಘೋಷಿಸುವ ಸಂಬಂಧ ಉಕ್ರೇನ್-ಬೆಲಾರುಸ್ ಗಡಿಯಲ್ಲಿ ಕಳೆದ ಭಾನುವಾರ ನಡೆದ ಮೊದಲ ಹಂತದ ಮಾತುಕತೆ ವಿಫಲವಾಗಿತ್ತು.
ಈ ನಡುವೆ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಮಿಲಿಟರಿ ಕಾರ್ಯಾಚರಣೆ ನಡೆಸುವಂತೆ ಆದೇಶ ನೀಡಿ ಇಂದಿಗೆ 7 ದಿನಗಳಾಗಿವೆ. ಮೊದಲ ಸುತ್ತಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಶೀಘ್ರ 2ನೇ ಸುತ್ತಿನ ಮಾತುಕತೆ ನಡೆಸಲು ಉದ್ದೇಶಿಲಾಗಿತ್ತು.
ರಷ್ಯಾ ವಕ್ತಾರ ಪೆಸ್ಕೋವ್ , ಎರಡನೇ ಸುತ್ತಿನ ಮಾತುಕತೆಗೆ ಉಕ್ರೇನ್ ಅಧಿಕಾರಿಗಳ ಬರುವಿಕೆಯನ್ನು ಬುಧವಾರ ಸಂಜೆ ವೇಳೆಗೆ ಸ್ಥಳದಲ್ಲಿದ್ದು ನಿರೀಕ್ಷಿಸುತ್ತದೆ ಎಂದಿದ್ದಾರೆ. ಮಾತುಕತೆ ನಡೆಯಬೇಕಾದ ಸ್ಥಳವನ್ನು ಬಹಿರಂಗಪಡಿಸಿಲ್ಲ. ಉಕ್ರೇನ್ ಕಡೆಯಿಂದ ಇದಕ್ಕೆ ತಕ್ಷಣದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
