Breaking NewsLatestಬಾಲಿವುಡ್ಮನರಂಜನೆಸಿನಿಮಾ
ಮೊದಲ ದಿನವೇ RRR ಸಿನಿಮಾದ ಕಲೆಕ್ಷನ್ ಎಷ್ಟು ಗೊತ್ತಾ?

ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ತೆರೆ ಕಂಡು ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಬಾಹುಬಲಿ ಯಶಸ್ವಿನ ನಂತರ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಅದ್ಭುತ ಪ್ರದರ್ಶನ ಕಾಣುತ್ತಿದೆ. ಇದೀಗ ಸಿನಿಮಾ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಅಂದಹಾಗೆ ಈ ಸಿನಿಮಾ ಮೊದಲ ದಿನದ ಕಲೆಕ್ಷನ್ ಬಗ್ಗೆ ಚಿತ್ರರಂಗದ ಕೆಲವು ಟ್ರೇಡ್ ವಿಶ್ಲೇಷಕರು ಪೋಸ್ಟ್ ಮಾಡಿದ್ದಾರೆ. ಅವರ ಪ್ರಕಾರ ಆರ್ ಆರ್ ಆರ್ ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಉಡೀಸ್ ಮಾಡಿದೆ. ಅಂದಾಜಿನ ಪ್ರಕಾರ ಈ ಸಿನಿಮಾ ಫಸ್ಟ್ ಡೇ ವಿಶ್ವಾದ್ಯಂತ 260 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗಿದೆ.
ಇನ್ನು ಎಲ್ಲಾ ಕಡೆ ಆರ್ ಆರ್ ಆರ್ ಸಿನಿಮಾ ಅಬ್ಬರಿಸುತ್ತಿದೆ. ಮಾ.24ರ ರಾತ್ರಿಯಿಂದಲೇ ಶೋ ಆರಂಭವಾಗಿತ್ತು. ಸಿನಿಮಾ ನೋಡಲು ಬೆಳಿಗ್ಗೆಯಿಂದಲೇ ಅಭಿಮಾನಿಗಳು ನಾ ಮುಂದು ತಾ ಮುಂದು ಎಂದು ನುಗ್ಗುತ್ತಿದ್ದರು. ಈ ಚಿತ್ರದಲ್ಲಿ ಆಲಿಯಾ ಭಟ್, ಅಜಯ್ ದೇವಗನ್ ನಟಿಸಿದ್ದು, ಬಿಟೌನ್ ಪ್ರೇಕ್ಷಕರನ್ನು ಕೂಡ ಸಿನಿಮಾ ಬಹಳವಾಗಿ ಆಕರ್ಷಿಸಿದೆ.
