Breaking NewsLatestರಾಷ್ಟ್ರೀಯಸುದ್ದಿ
ಇಂಗ್ಲೆಂಡ್ ಅಭಿವೃದ್ಧಿಗೆ ಮಹತ್ವದ ಕ್ರಮದ ಸುಳಿವು ನೀಡಿದ ರಿಷಿ ಸುನಕ್

ಇಂಗ್ಲೆಂಡ್ ಅಭಿವೃದ್ಧಿಗೆ ಕಠಿಣ ನಡೆ ಅಗತ್ಯವೆಂದು ನೂತನ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. ಹಲವು ನಿರ್ಧಾರಗಳ ಬಗ್ಗೆ ರಿಷಿ ಸುನಕ್ ಸುಳಿವು ನೀಡಿದ್ದಾರೆ.
ಇಂಗ್ಲೆಂಡ್ ಪ್ರಗತಿಗೆ ಹಗಲು ರಾತ್ರಿ ಕಾರ್ಯನಿರ್ವಹಿಸಲಾಗುವುದು ಎಂದು ಭರವಸೆ ನೀಡಿದ ಅವರು, ಮೊದಲು ಆರ್ಥಿಕ ಸ್ಥಿರತೆ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು.
ಬ್ರಿಟನ್ ಜನರ ನಂಬಿಕೆ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನನ್ನ ನಡೆಯ ಮೂಲಕ ಒಗ್ಗಟ್ಟು ನಿರ್ಮಾಣ ಮಾಡಲಾಗುವುದು. ಈ ಕ್ಷಣದಿಂದಲೇ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಘೋಷಿಸಿದ್ದಾರೆ.
