Breaking NewsLatestರಾಜ್ಯಸುದ್ದಿ

ಇನ್ನು ಮುಂದೆ ಅಂಕಪಟ್ಟಿಯಲ್ಲಿ ಒಂದೇ ಅಂಕ ವ್ಯತ್ಯಾಸ ಇದ್ದರೂ ಅಂಕಪಟ್ಟಿ ಬದಲು

ಬೆಂಗಳೂರು: ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತರಲು ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. ಇನ್ನು ಮುಂದೆ ಒಂದು ಅಂಕದಲ್ಲಿ ಬದಲಾವಣೆ ಇದ್ದರು ಅಂಕ ಪಟ್ಟಿ ಬದಲಾವಣೆ ಮಾಡಲು ನಿರ್ಧರಿಸಿದೆ. ಈ ನಿಯಮ ಮುಂದಿನ ಶಿಕ್ಷಣಿಕ ವರ್ಷದಿಂದಲೇ ಜಾರಿಗೆ ಬರುವ ನಿರೀಕ್ಷೆ ಇದೆ.

ಇದುವರೆಗೂ ಇದ್ದ ನಿಯಮದ ಪ್ರಕಾರ ಮರು ಮೌಲ್ಯಮಾಪನದ ವೇಳೆ ಆರು ಅಂಕಗಳಿಗಿಂತ ಹೆಚ್ಚು ಅಂಕಗಳ ವ್ಯತ್ಯಾಸ ಇದ್ದರೆ ಮಾತ್ರವೇ ಅಂಕ ಪಟ್ಟಿಯನ್ನ ಬದಲಾಯಿಸಲಾಗುತ್ತಿತ್ತು. ಆರು ಅಂಕಗಳಿಗಿಂತ ಕಡಿಮೆ ಅಂಕಗಳ ವ್ಯತ್ಯಾಸ ಇದ್ದರೆ ಮೊದಲಿನ ಅಂಕಪಟ್ಟಿಯನ್ನೇ ನೀಡಲಾಗುತ್ತಿತ್ತು. ಆದರೆ ಇನ್ನೂ ಮುಂದೆ ವಿದ್ಯಾರ್ಥಿಯ ಒಂದು ಅಂಕದಲ್ಲಿ ಬದಲಾವಣೆ ಇದ್ದರೂ ಅಂಕ ಪಟ್ಟಿ ಬದಲಾವಣೆ ಮಾಡಲಾಗುತ್ತದೆ.

ಮರು ಮೌಲ್ಯಮಾಪನದಲ್ಲಿ ಒಂದು ಅಂಕಗಳ ವ್ಯತ್ಯಾಸ ಇದ್ದರೂ ಅಂಕಪಟ್ಟಿ ಬದಲಾಯಿಸುವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಕೇಳಿಕೊಂಡಿದ್ದರು. ಹೀಗಾಗಿ ಅಂಕಪಟ್ಟಿಯಲ್ಲಿ ಬದಲಾವಣೆ ತರಲಾಗುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button