Breaking NewsLatestರಾಷ್ಟ್ರೀಯಶಿಕ್ಷಣ

ಮೆಡಿಕಲ್ ಕೋರ್ಸ್​ಗಳಲ್ಲಿ ಹಿಂದುಳಿದ ವರ್ಗಕ್ಕೆ ಶೇ.27, ಆರ್ಥಿಕ ದುರ್ಬಲರಿಗೆ ಶೇ.10 ಸೀಟು

ನವದೆಹಲಿ: ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್​ಗಳಲ್ಲಿ ಇನ್ನು ಮುಂದೆ ಹಿಂದುಳಿದ ವರ್ಗದವರಿಗೆ ಶೇ.27 ಸೀಟುಗಳು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಸೀಟುಗಳು ಮೀಸಲಾಗಿರಲಿವೆ.

ಪ್ರಧಾನಿ ಮೋದಿ ಗುರುವಾರ ಈ ಘೋಷಣೆ ಮಾಡಿದ್ದಾರೆ.

ಎಂಬಿಬಿಎಸ್, ಎಂಡಿ, ಎಂಎಸ್, ಬಿಡಿಎಸ್,ಎಂಡಿಎಸ್ ಮತ್ತು ಡಿಪ್ಲೊಮಾ ಮೆಡಿಕಲ್ ಪ್ರೋಗ್ರಾಮ್​ಗಳಿಗೆ ಈ ಮೀಸಲಾತಿ ಇದೇ ಶೈಕ್ಷಣಿಕ ವರ್ಷದಿಂದ ಅನ್ವಯವಾಗಲಿದೆ.

ಈ ನಿರ್ಧಾರದಿಂದ ಎಂಬಿಬಿಎಸ್​ನಲ್ಲಿ ಸುಮಾರು 1,500 ಹಾಗೂ ಸ್ನಾತಕೋತ್ತರದಲ್ಲಿ 2,500 ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಹಾಗೆಯೇ ಆರ್ಥಿಕವಾಗಿ ಹಿಂದುಳಿದ 550 ವಿದ್ಯಾರ್ಥಿಗಳಿಗೆ ಎಂಬಿಬಿಎಸ್​ನಲ್ಲಿ ಮತ್ತು 1 ಸಾವಿರ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರದಲ್ಲಿ ಅನುಕೂಲ ಒದಗಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button