Breaking NewsLatestಜಿಲ್ಲಾ ಸುದ್ದಿಬೆಂಗಳೂರುರಾಜ್ಯಸುದ್ದಿ

ಮೆಟ್ರೊ ವಯಾಡಕ್ಟ್ ಪ್ರವೇಶಿಸದಂತೆ ಮನವಿ

ಬೆಂಗಳೂರು: ಮೆಟ್ರೊ ರೈಲು ಮಾರ್ಗದ ವಯಾಡಕ್ಟ್‌ ಮೇಲೆ ಹಾದು ಹೋಗಿರುವ 33 ಕೆ.ವಿ ವಿದ್ಯುತ್ ಕೇಬಲ್‌ಗಳು ಮತ್ತು ವಯಾಡಕ್ಟ್‌ ಮೇಲೆ ಹಾಕಿರುವ 750 ವೋಲ್ಟ್‌ ರೈಲುಗಳ ಭಾಗಗಳಿಗೆ ಅ.15ರಿಂದ ಪರೀಕ್ಷಾರ್ಥ ವಿದ್ಯುತ್ ಹರಿಸಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಸದೆಮಂಗಲ, ನಲ್ಲೂರುಹಳ್ಳಿ, ಕುಂದಲಹಳ್ಳಿ, ಸೀತಾರಾಮಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರಪಾಳ್ಯ, ಮಹದೇವಪುರ ಮಾರ್ಗದಲ್ಲಿ ಕೇಬಲ್‌ಗಳನ್ನು ನೇರವಾಗಿ ಸಂಪರ್ಕಿಸಿದರೆ ಮಾರಣಾಂತಿಕ ಅಪಾಯ ಉಂಟಾಗಬಹುದು. ಆದ್ದರಿಂದ ಅನುಮತಿ ಇಲ್ಲದೆ ಯಾರೂ ವಯಾಡಕ್ಟ್‌ಗೆ ಪ್ರವೇಶ ಮಾಡಬಾರದು ಎಂದು ಬಿಎಂಆರ್‌ಸಿಎಲ್ ಎಚ್ಚರಿಸಿದೆ. ಅನಧಿಕೃತ ಪ್ರವೇಶದಿಂದ ತೊಂದರೆಯಾದರೆ ಬಿಎಂಆರ್‌ಸಿಎಲ್ ಜವಾಬ್ದಾರಿ ಆಗುವುದಿಲ್ಲ ಎಂದು ತಿಳಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button