Breaking NewsLatestಜಿಲ್ಲಾ ಸುದ್ದಿದಾವಣಗೆರೆರಾಜ್ಯಸುದ್ದಿ

ಧಮ್, ಗಂಡಸ್ತನದ ಬಗ್ಗೆ ಕಾಂಗ್ರೆಸ್ ನವರಿಗೆ ಕುಮಾರಸ್ವಾಮಿ ಹೇಳಲಿ: ರೇಣುಕಾಚಾರ್ಯ ಕಿಡಿಕಿಡಿ

ದಾವಣಗೆರೆ: ಹಲಾಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಿಎಂ ಬಸವರಾಜ್ ಬೊಮ್ಮಾಯಿ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ, ಧಮ್, ಗಂಡಸ್ತನದ ಬಗ್ಗೆ ಕಾಂಗ್ರೆಸ್ ನವರಿಗೆ ಹೇಳಲಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರಿಗೆ ಆಡಳಿತ ನಡೆಸಿ ಅನುಭವವಿದೆ. ಇಂಥ ಉನ್ನತ ಹುದ್ದೆಯಲ್ಲಿದ್ದವರು ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ. ನಾನು ಇದನ್ನು ಖಂಡಿಸುತ್ತೇನೆ. ಕುಮಾರಸ್ವಾಮಿ ತನ್ನ ಹೇಳಿಕೆ ವಾಪಸ್ ಪಡೆಯಬೇಕು. ರಾಜ್ಯದ ಜನರ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಯಾವ ರೀತಿ ಆಡಳಿತ ನಡೆಸಬೇಕು.  ಕಾನೂನು ಸುವ್ಯವಸ್ಥೆ ಹೇಗೆ ಕಾಪಾಡಬೇಕು ಎಂಬುದು ಸಿಎಂ ಬೊಮ್ಮಾಯಿ ಅವರಿಗೆ ಗೊತ್ತಿದೆ. ರಾಜಕಾರಣದ, ಆಡಳಿತದ ಅನುಭವ ಇದೆ. ಸಂಘರ್ಷಕ್ಕೆ ಅವಕಾಶ ಕೊಡಲ್ಲ, ಸಾಮರಸ್ಯ ಕಾಪಾಡಬೇಕು ಎಂಬುದು ಎಲ್ಲರ ಅಪೇಕ್ಷೆ. ನಮ್ಮ ನಿಲುವು ಕೂಡ ಇದೇ ಆಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ಇದೆ. ಹಿಜಾಬ್, ಕಾಶ್ಮೀರಿ ಫೈಲ್ಸ್, ಭಗವದ್ಗೀತೆ, ಹಲಾಲ್ ವಿವಾದ ಹುಟ್ಟು ಹಾಕಿದ್ದು ಕಾಂಗ್ರೆಸ್ ಮುಖಂಡರು. ಕಾಂಗ್ರೆಸ್ ನ ಮುಖಂಡರು ನಿರಂತರವಾಗಿ ವಿವಾದ ಹುಟ್ಟು ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ನವರು ಹಿಜಾಬ್ ಬೆಂಬಲಿಸದಿದ್ದರೆ  ಸಂಘರ್ಷ ಆಗ್ತಿರಲಿಲ್ಲ.  ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಧರಿಸಿ ಬನ್ನಿ. ಸರ್ಕಾರದ ಆದೇಶ ಪಾಲಿಸಿ ಎಂದಿದ್ದರೆ ವಿವಾದ ಆಗ್ತಿರಲಿಲ್ಲ.‌ ಕಾಶ್ಮೀರಿ ಫೈಲ್ಸ್ ವಿಚಾರದಲ್ಲಿಯೂ ವಿನಾಕಾರಣ ವಿವಾದವನ್ನು ಕಾಂಗ್ರೆಸ್ ನವರೇ ಹುಟ್ಟು ಹಾಕಿದ್ದಾರೆ. ನಮ್ಮ ಪಕ್ಷವಾಗಲೀ, ಮುಖಂಡರಾಗಲೀ, ಸರ್ಕಾರವಾಗಲೀ, ಸಂಘಟನೆಗಳ ಮುಖ್ಯಸ್ಥರು ಕಾರಣರಲ್ಲ. ಕಾಂಗ್ರೆಸ್ ಮುಖಂಡರ ವಿವಾದಾತ್ಮಕ ಹೇಳಿಕೆಯಿಂದ ಸಂಘರ್ಷಕ್ಕೆ ಕಾರಣವಾಗಿದೆ. ಕೋಮುಗಲಭೆ, ದ್ವೇಷ ರಾಜಕಾರಣ ಮಾಡುವುದು ಕಾಂಗ್ರೆಸ್. ಕೋಮುಗಲಭೆ ವೋಟ್ ಬ್ಯಾಂಕ್ ರಾಜಕಾರಣ ಮಾಡಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದಾಗಿ ಬಾಳುವಂತಾಗಬೇಕು ಎಂದು ಆಶಿಸಿದರು‌.

Spread the love

Related Articles

Leave a Reply

Your email address will not be published. Required fields are marked *

Back to top button