Breaking NewsLatestರಾಷ್ಟ್ರೀಯವಾಣಿಜ್ಯಸುದ್ದಿ

ರಿಲಯನ್ಸ್ ವಿಶ್ವದ ಬಲಿಷ್ಠ ಕಂಪನಿಗಳಲ್ಲಿ ಒಂದಾಗಲಿದೆ: ಮುಖೇಶ್ ಅಂಬಾನಿ

ನವದೆಹಲಿ: ಮುಂಬರುವ ವರ್ಷಗಳಲ್ಲಿ ರಿಲಯನ್ಸ್ ಕಂಪನಿ ವಿಶ್ವದ  ಬಲಿಷ್ಠ ಮತ್ತು ಅತ್ಯಂತ ಪ್ರತಿಷ್ಠಿತ ಭಾರತೀಯ ಕಂಪನಿಗಳಲ್ಲಿ ಒಂದಾಗಲಿದೆ ಎಂದು ರಿಲಯನ್ಸ್ ಸಂಸ್ಥೆ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. ರಿಲಯನ್ಸ್ ಗ್ರೂಪ್ ನ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಅವರ ಜನ್ಮದಿನದ ಅಂಗವಾಗಿ ನಡೆದ ರಿಲಯನ್ಸ್ ಫ್ಯಾಮಿಲಿ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವ್ಯಾಪಾರ-ವಹಿವಾಟು ವಲಯದಲ್ಲಿ ರಿಲಯನ್ಸ್ ಪ್ರಮುಖ ನಾಯಕತ್ವ ಪರಿವರ್ತನೆಯ ಪ್ರಕ್ರಿಯೆಯಲ್ಲಿದ್ದು ಇದಕ್ಕೆ ಇನ್ನಷ್ಟು ವೇಗ ದೊರೆಯಬೇಕಿದೆ. ಚಿಲ್ಲರೆ ವ್ಯಾಪಾರ, ಟೆಲಿಕಾಂ ಮತ್ತು ನವೀಕರಿಸಿದ ಇಂಧನ ವಲಯ ವ್ಯವಹಾರವು ಅಭೂತಪೂರ್ವ ಎತ್ತರ ತಲುಪುತ್ತಿದೆ ಎಂದರು.  

ದೊಡ್ಡ ಕನಸುಗಳು ಮತ್ತು ಅಸಾಧ್ಯವೆಂದು ತೋರುವ ಗುರಿಗಳನ್ನು ಸಾಧಿಸುವುದು, ಸರಿಯಾದ ಜನ ಮತ್ತು ನಾಯಕತ್ವದ ಗುರಿಯನ್ನು ವರ್ತಮಾನದ ಹಿರಿಯರು ಮತ್ತು ಮುಂದಿನ ಪೀಳಿಗೆ ಹೊಂದಬೇಕು ಎಂದೂ 64ರ ಹರೆಯದ ಮುಖೇಶ್ ಅಂಬಾನಿ ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button