Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯಸುದ್ದಿಹುಬ್ಬಳ್ಳಿ - ಧಾರವಾಡ

ಹಿಜಾಬ್ ಧರಿಸದಿರುವುದರಿಂದ ದೇಶದಲ್ಲಿ ರೇಪ್ ರೇಟ್ ಹೆಚ್ಚಾಗಿದೆ: ಜಮೀರ್ ಅಹ್ಮದ್

ಧಾರವಾಡ: ಹಿಜಾಬ್ ಧರಿಸದಿರುವುದರಿಂದ ದೇಶದಲ್ಲಿ ರೇಪ್ ರೇಟ್ ಹೆಚ್ಚಾಗಿದೆ. ಎಲ್ಲ ದೇಶಗಳಿಗಿಂತ ನಮ್ಮ ದೇಶದಲ್ಲಿ ರೇಪ್ ರೇಟ್ ಜಾಸ್ತಿಯಾಗಿದೆ. ಹಿಜಾಬ್ ಹಾಕಿಕೊಂಡಲ್ಲಿ ಅದು ಕಡಿಮೆಯಾಗುತ್ತದೆ. ಹಿಜಾಬ್ ಹಾಕುವುದರಿಂದ ನಮ್ಮ ಹೆಣ್ಣಮಕ್ಕಳಿಗೆ ಅದೊಂದು ರಕ್ಷಣೆ ಎಂದು ಮೂಲಕ  ಮಾಜಿ ಸಚಿವ ಜಮೀರ ಅಹ್ಮದ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಈ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಹಿಜಾಬ್ ಹಾಕುವುದರಿಂದ ನಮ್ಮ ಹೆಣ್ಣು ಮಕ್ಕಳ ಸೌಂದರ್ಯ ಕಾಣುವುದಿಲ್ಲ. ಹಾಗಾಗಿ ಅವರ ಮೇಲೆ ರೇಪ್ ನಡೆಯುದಿಲ್ಲ. ನನ್ನ ಅಭಿಪ್ರಾಯವನ್ನು ನಾನು ಹೇಳಿದ್ದೇನೆ ಅಷ್ಟೇ, ಬೇರೆಯವರ ಅಭಿಪ್ರಾಯ ನನಗೆ ಗೊತ್ತಿಲ್ಲ ಎಂದರು.‌

ಮುಸ್ಲಿಂ ಸಮುದಾಯದಲ್ಲಿಯೇ ಹಲವು ಮಹಿಳೆಯರು ಹಿಜಾಬ್ ಹಾಕುವುದಿಲ್ಲ. ಹಿಜಾಬ್ ಹಾಕಿದರೆ ಅವರ ಮೇಲಾಗುವ ರೇಪನಂತಹ ದೌರ್ಜನ್ಯವನ್ನು ತಡೆಯಬಹುದಾಗಿದೆ. ಹಾಕದೇ ಇರುವವರು ಹಾಕಬೇಕು ಅಂತಾ ನಾನು ಹೇಳಿಲ್ಲ. ಇದರಿಂದ ನಮ್ಮ ಹೆಣ್ಣು ಮಕ್ಕಳ ಬ್ಯೂಟಿ ಗಂಡು ಮಕ್ಕಳಿಗೆ ಕಾಣುತ್ತದೆ. ಇದರಿಂದ ಅವರಿಗೆ ಪ್ರಚೋದನೆ ನೀಡಿದಂತಾಗುತ್ತದೆ. ಹಿಜಾಬ್ ಹಾಕುವುದು ನಮ್ಮ ಹೆಣ್ಣುಮಕ್ಕಳಿಗೆ ಒಳ್ಳೆಯದು ಎಂದು ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button