Breaking Newsಮನರಂಜನೆಸೆಲೆಬ್ರಿಟಿ

ರಾಧೆ ಶ್ಯಾಮ್ ನಿರ್ಮಾಪಕ ಭೂಷಣ್ ಕುಮಾರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

‘ಬಾಲಿವುಡ್ ನಿರ್ಮಾಪಕ ಭೂಷಣ್ ಕುಮಾರ್ ವಿರುದ್ಧ 30 ವರ್ಷದ ಮಾಡೆಲ್ , ನಟಿ ಅಂಧೇರಿಯ ಡಿಎನ್ ನಗರದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾರೆ.

ಚಲನಚಿತ್ರಗಳಲ್ಲಿ ಕೆಲಸ ಕೊಡಿಸುವ ಸುಳ್ಳು ಭರವಸೆ ನೀಡಿ 2017 ರಿಂದ 2020 ರವರೆಗೆ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಈ ಆರೋಪವನ್ನು ಭೂಷಣ್ ತಳ್ಳಿಹಾಕಿದ್ದು, ಅವರು ಈಗಾಗಲೇ ಫಿಲ್ಮ್ ಮತ್ತು ಮ್ಯೂಸಿಕ್ ವಿಡಿಯೋಗಳಲ್ಲಿ ಟಿ-ಸೀರೀಸ್ ಬ್ಯಾನರ್ ಗಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ ಎನ್ನಲಾಗಿದೆ. ಭೂಷಣ್ ಕುಮಾರ್ ಟಾಲಿವುಡ್ ನ ಜನಪ್ರಿಯ ನಿರ್ಮಾಪರಾಗಿದ್ದು, ಪ್ರಸ್ತುತ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟಿಸಿದ ರಾಧೆ ಶ್ಯಾಮ್ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button