Breaking NewsLatestರಾಜಕೀಯರಾಷ್ಟ್ರೀಯ
ಸಿಧು ಪಂಜಾಬ್ ರಾಜಕಾರಣದ ರಾಖೀ ಸಾವಂತ್; ಆಮ್ ಆದ್ಮಿ ನಾಯಕನ ಟೀಕೆ

ಹೊಸದಿಲ್ಲಿ: ಎಎಪಿಯ ರಾಘವ್ ಚಡ್ಡಾ ಶುಕ್ರವಾರ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಧು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರನ್ನು ಪಂಜಾಬ್ ರಾಜಕಾರಣದ “ರಾಖಿ ಸಾವಂತ್” ಎಂದು ಚಡ್ಡಾ ಕರೆದಿದ್ದಾರೆ.
ಕೇಂದ್ರದ ಕೃಷಿ ಕಾಯ್ದೆಗಳ ಕುರಿತ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತವರ ಸರ್ಕಾರದ ನಿಲುವನ್ನು ಟೀಕಿಸಿ ವಿಡಿಯೋ ಒಂದನ್ನು ಸಿಧು ಪೋಸ್ಟ್ ಮಾಡಿದ್ದ ಬೆನ್ನಲ್ಲೇ ಚಡ್ಡಾ ಈ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಪಂಜಾಬ್ ರಾಜಕೀಯದ ರಾಖಿ ಸಾವಂತ್ ನವಜೋತ್ ಸಿಂಗ್ ಸಿಧು ಕ್ಯಾಪ್ಟನ್ ವಿರುದ್ಧ ಎಡಬಿಡದೆ ವಾಗ್ದಾಳಿ ನಡೆಸಿದ್ದಕ್ಕಾಗಿ ಹೈಕಮಾಂಡ್ನಿಂದ ಬೈಸಿಕೊಂಡಿದ್ದಾರೆ. ಹೀಗಾಗಿ ಬದಲಾವಣೆ ಇರಲಿ ಎಂದು ಕೇಜ್ರಿವಾಲ್ ಮೇಲೆ ಹರಿಹಾಯ್ದಿದ್ದಾರೆ ಎಂದು ಚಡ್ಡಾ ವ್ಯಂಗ್ಯವಾಡಿದ್ದಾರೆ.
ಇವತ್ತಷ್ಟೇ ಇದು. ನಾಳೆ ಮತ್ಎ ಯಥಾ ಪ್ರಕಾರ ಅಮರೀಂದರ್ ಸಿಂಗ್ ವಿರುದ್ಧವೇ ಸಿಧು ತಮ್ಮ ತೀವ್ರ ಮಾತು ಆರಂಭಿಸುತ್ತಾರೆ ಎಂದೂ ಚಡ್ಡಾ ಕೆಣಕಿದ್ದಾರೆ.
