Breaking NewsLatestಮನರಂಜನೆಸಿನಿಮಾಸೆಲೆಬ್ರಿಟಿಸ್ಯಾಂಡಲ್ ವುಡ್
ಕುಟುಂಬ ಸದಸ್ಯರ ಜೊತೆ ಬರ್ತಡೇ ಆಚರಿಸಿಕೊಂಡ ರಾಧಿಕಾ ಪಂಡಿತ್: ಫೋಟೋ ನೋಡಿ ಸಂಭ್ರಮಿಸಿದ ಫ್ಯಾನ್ಸ್

ಸ್ಯಾಂಡಲ್ವುಡ್ ಸಿಂಡ್ರೆಲಾ ನಟಿ ರಾಧಿಕಾ ಪಂಡಿತ್ ನಿನ್ನೆ (ಮಾ.7) ಕುಟುಂಬ ಸದಸ್ಯರೊಂದಿಗೆ ಜನ್ಮದಿನ ಆಚರಿಸಿಕೊಂಡಿದ್ದಾರೆ.

38ನೇ ವಸಂತಕ್ಕೆ ಕಾಲಿಟ್ಟಿರುವ ರಾಧಿಕಾ ಪಂಡಿತ್ಗೆ ಸೆಲೆಬ್ರಿಟಿಗಳು, ಸ್ನೇಹಿತರು, ಅಭಿಮಾನಿಗಳು ಸೇರಿದಂತೆ ಸಾಕಷ್ಟು ಮಂದಿ ಶುಭ ಹಾರೈಸಿದ್ದಾರೆ.

ಕುಟುಂಬ ಸದಸ್ಯರೊಂದಿಗೆ ಕೇಕ್ ಕಟ್ ಮಾಡಿ ಜನ್ಮ ದಿನ ಆಚರಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್, ಪುತ್ರಿ ಆರ್ಯಾ ಹಾಗೂ ಯಥರ್ವ್ನೊಂದಿಗೆ ರಾಧಿಕಾ ಕೇಕ್ ಕಟ್ ಮಾಡಿತ್ತಿರುವ ಫೋಟೋ ವೈರಲ್ ಆಗಿದೆ.

ರಾಧಿಕಾ ಪಂಡಿತ್ ಜನ್ಮ ದಿನದ ಸಂಭ್ರಮದ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಮುದ್ದಾದ ಫೋಟೋ ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

