Breaking NewsLatestರಾಜ್ಯರಾಷ್ಟ್ರೀಯಸುದ್ದಿ

ಪ್ರಧಾನಿ ಭದ್ರತಾ ಲೋಪ: ನ್ಯಾ.ಇಂದೂ ಮಲ್ಹೋತ್ರಾ ನೇತೃತ್ವದಲ್ಲಿ ಐವರ ಸಮಿತಿ ರಚಿಸಿದ ಸುಪ್ರೀಂ

ನವದೆಹಲಿ: ಪಂಜಾಬ್ ನಲ್ಲಿ ಪ್ರಧಾನಿ ಭದ್ರತಾ ಲೋಪ ಸಂಬಂಧ ತನಿಖೆ ನಡೆಸಲು ಸುಪ್ರೀಂಕೋರ್ಟ್ ರಚಿಸಿರುವ ತನಿಖೆ ಸಮಿತಿ ಮುಖ್ಯಸ್ಥರಾಗಿ ನ್ಯಾಯಾಮೂರ್ತಿ ಇಂದು ಮಲ್ಹೋತ್ರಾ ಬುಧವಾರ ನೇಮಕವಾಗಿದ್ದಾರೆ. ಕಳೆದ ಜ. 5 ರಂದು ಪಂಜಾಬ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಸಂದರ್ಭದಲ್ಲಿ ಭದ್ರತಾ ಲೋಪ ಕುರಿತು ತನಿಖೆ ಮಾಡಲು ಸುಪ್ರೀಂ ಕೋರ್ಟ್ ಸಮಿತಿ ರಚಿಸುವುದಾಗಿ ಹೇಳಿತ್ತು.

ಈ ಸಮಿತಿ ಪಂಜಾಬ್ ಮತ್ತು ಹರಿಯಾಣ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್, ರಾಷ್ಟ್ರೀಯ ತನಿಖಾ ಸಂಸ್ಥೆಯ ಮಹಾನಿರ್ದೇಶಕರು ಅಥವಾ ಅವರು ನಾಮನಿರ್ದೇಶನಗೊಂಡ ಇನ್ಸ್​​ಪೆಕ್ಟರ್​ ಜನರಲ್ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿ ಮತ್ತು ಎಡಿಜಿಪಿ ಸಮಿತಿಯ ಇತರೆ ಸದಸ್ಯರಾಗಿರುತ್ತಾರೆ ಎಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ಹೇಳಿದೆ.

ಪಂಜಾಬ್ ನಲ್ಲಿ ಪ್ರಧಾನಿ ಭದ್ರತಾ ಲೋಪ ವಿಷಯವನ್ನು “ಏಕಪಕ್ಷೀಯ ವಿಚಾರಣೆಗಳಿಗೆ ಬಿಡಲಾಗುವುದಿಲ್ಲ” ಮತ್ತು ನ್ಯಾಯಾಂಗವಾಗಿ ತರಬೇತಿ ಪಡೆದ ಮನಸ್ಸಿನಿಂದ ಪರಿಶೀಲಿಸಬೇಕು ಮತ್ತು ಸಮಗ್ರ ವರದಿಯನ್ನು ಸಲ್ಲಿಸಬೇಕು ಎಂದೂ ನ್ಯಾಯಾಲಯ ಹೇಳಿದೆ.

Spread the love

Related Articles

Leave a Reply

Your email address will not be published. Required fields are marked *

Back to top button