ಡಾರ್ಲಿಂಗ್ ಕೃಷ್ಣ ಬಳಿ ಇದ್ದ ‘ಜೇಮ್ಸ್’ ಟೈಟಲ್ ಪುನೀತ್ ರಾಜ್ ಕುಮಾರ್ ಅವರಿಗೆ ಸಿಕ್ಕಿದ್ದು ಹೇಗೆ?

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ಮಾರ್ಚ್ 17ರಂದು ಪುನೀತ್ ಹುಟ್ಟು ಹಬ್ಬದ ಪ್ರಯುಕ್ತ ರಿಲೀಸ್ ಆಗಲಿದೆ. ವಿಶ್ವದ್ಯಾಂತ ತೆರೆಗೆ ಬರಲಿರೋ ಜೇಮ್ಸ್ ಸಿನಿಮಾವನ್ನ ಕಣ್ಮುಂಬಿಕೊಳ್ಳಲು ಅಭೀಮಾನಿಗಳು ಕಾಯ್ತಿದ್ದಾರೆ. ಈ ಮಧ್ಯೆ ಜೇಮ್ಸ್ ಸಿನಿಮಾದ ಟೈಟಲ್ ಹಿಂದಿನ ಕಥೆಯನ್ನ ನಟ ಡಾರ್ಲಿಂಗ್ ಕೃಷ್ಣ ಬಿಚ್ಚಿಟ್ಟಿದ್ದಾರೆ.
ಜೇಮ್ಸ್ ಸಿನಿಮಾ ಟೈಟಲ್ ನಿಂದಲೇ ಸಾಕಷ್ಟು ಕುತೂಹಲ ಕ್ರಿಯೇಟ್ ಮಾಡಿತ್ತು. ಅಂದ್ಹಾಗೆ ಮೊದಲು ಜೇಮ್ಸ್ ಟೈಟಲ್ ನಟ ಡಾರ್ಲಿಂಗ್ ಕೃಷ್ಣರ ಬಳಿ ಇತ್ತು. ನಾನು ನನ್ನ ನಿರ್ಮಾಣ ಸಂಸ್ಥೆಯಡಿಯಲ್ಲಿ ಜೇಮ್ಸ್ ಟೈಟಲ್ ನೋಂದಣೀ ಮಾಡಿಕೊಂಡಿದ್ದಾಗಿ ಕೃಷ್ಣ ಹೇಳಿಕೊಂಡಿದ್ದಾರೆ.
‘ಈ ಸಿನಿಮಾ ಟೈಟಲ್ ನಾನು ಮತ್ತು ಜೇಮ್ಸ್ ಚಿತ್ರದ ನಿರ್ದೇಶಕ ಚೇತನ್ ರಿಜಿಸ್ಟರ್ ಮಾಡಿಕೊಂಡು ಸಿನಿಮಾ ಮಾಡಬೇಕು ಎಂದುಕೊಂಡಿದ್ದೆವು. ಆದರೆ ಒಂದು ದಿನ ಚೇತನ್ ಫೋನ್ ಮಾಡಿ ನನಗೆ ಅಪ್ಪು ಸರ್ ಡೇಟ್ ಸಿಕ್ಕಿದೆ. ಜೇಮ್ಸ್ ಟೈಟಲ್ ನಲ್ಲಿ ಅವರಿಗೆ ಸಿನಿಮಾ ಮಾಡ್ತೀನಿ ಎಂದರು. ನಾನು ತಕ್ಷಣವೇ ಓಕೆ ಎಂದು ನನ್ನ ಸಂಸ್ಥೆ ಹೆಸರಿನಲ್ಲಿ ರಿಜಿಸ್ಟರ್ ಆಗಿದ್ದ ಟೈಟಲ್ ನ್ನು ಚೇತನ್ ಅವರಿಗೆ ನೀಡಿದೆ. ಅಪ್ಪು ಸರ್ ಯಾವುದೇ ಸಿನಿಮಾವಾದರೂ ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ. ಜೇಮ್ಸ್ ಕೂಡಾ ಮಿಸ್ ಮಾಡಲ್ಲ’ ಎಂದಿದ್ದಾರೆ ನಟ ಡಾರ್ಲಿಂಗ್ ಕೃಷ್ಣ.
