ಕಲಬುರಗಿಯಲ್ಲಿ ನಾಳೆ ಪುನೀತ್ ಜೇಮ್ಸ್ ರಿಲೀಸ್: ಅಭಿಮಾನಿಗಳಿಂದ ಕೇಕ್, ಅಭಿಷೇಕ ಊಟದ ವ್ಯವಸ್ಥೆ

ಕಲಬುರಗಿ: ಮರೆಯಾದ ಮಾಣಿಕ್ಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಚಿತ್ರ ಜೇಮ್ಸ್ ನಾಳೆ ಸ್ಕ್ರೀನ್ ಗೆ ಅಪ್ಪಳಿಸುತ್ತಿದ್ದು, ಅಸಂಖ್ಯಾತ ಅಪ್ಪು ಅಭಿಮಾನಿಗಳು ಜೇಮ್ಸ್ ಖದರ್ ನೋಡಲು ಕಾತುರದಿಂದ ಎದರು ನೋಡುತ್ತಿದ್ದಾರೆ.
ತೊಗರಿ ನಾಡು ಕಲಬುರಗಿಯಲ್ಲಿ ಅಪ್ಪು ಅಭಿಮಾನಿಗಳಲ್ಲಿ ಜೇಮ್ಸ್ ಹಬ್ಬದ ಸಂಭ್ರಮ ಮನೆ ಮಾಡಿದೆ. ತಮ್ಮ ನೆಚ್ಚಿನ ಪವರ್ ಹೀರೊ ಅಪ್ಪು ಜೇಮ್ಸ್ ಚಿತ್ರದ ಭರ್ಜರಿ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಶೆಟ್ಟಿ ಮಲ್ಟಿ ಪ್ಲೇಕ್ಸ್, ಸಂಗಮ, ತ್ರಿವೇಣಿ, ಮೀರಜ್ ಚಿತ್ರಮಂದಿಗಳಲ್ಲಿ ಜೇಮ್ಸ್ ಪ್ರದರ್ಶನ ಕಾಣುತ್ತಿದ್ದು, ಚಿತ್ರಮಂದಿರಗಳ ಮುಂದೆ ಅಪ್ಪು ಅವರ ಬೃಹತ್ ಕಟೌಟ್, ಪ್ಲೇಕ್ಸ್, ಬ್ಯಾನರ್ ಗಳು ರಾರಾಜಿಸುತ್ತಿವೆ. ಶೆಟ್ಟಿ ಮಲ್ಟಿಪ್ಲೆಕ್ಸ್ ನಲ್ಲಿ ಕಲಬುರಗಿ ಅಪ್ಪುಅಡ್ಡಾ ಅಭಿಮಾನಿಗಳು ಪವರ್ ಖದರ್ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
ಮೊದಲ ಚಿತ್ರದಿಂದ ಕೊನೆ ಚಿತ್ರವರೆಗೆ ಫ್ಲೆಕ್ಸ್
ದೈಹಿಕವಾಗಿ ಮರೆಯಾಗಿರುವ ಮಾಣಿಕ್ಯನನ್ನು ನೆನೆದ ಕಲಬುರಗಿ ಅಪ್ಪುಅಡ್ಡಾ ಅಭಿಮಾನಿಗಳು, ಪುನೀತ್ ನಟಿಸಿರುವ ಮೊದಲ ಚಿತ್ರ ಅಪ್ಪು ಚಿತ್ರದಿಂದ ಕೊನೆಯ ಚಿತ್ರ ಜೇಮ್ಸ್ ಸಿನಿಮಾವರೆಗೆ ಪ್ಲೇಕ್ಸ್ ಗಳು ಥೇಟರ್ ಮುಂದೆ ಅಳವಡಿಸಿ ಅಭಿಮಾನ ಮೇರೆದಿದ್ದಾರೆ.
ಕೇಕ್ -ಹಾಲಿನ ಅಭಿಷೇಕ- ಊಟದ ವ್ಯವಸ್ಥೆ
ಕೇಕ್ ಕಟ್ ಮಾಡುವ ಮೂಲಕ ಜೇಮ್ಸ್ ಗೆ ಆತ್ಮೀಯವಾಗಿ ಸ್ವಾಗತಿಸುತ್ತಿರುವ ಪವರ್ ಸ್ಟಾರ್ ಫ್ಯಾನ್ಸ್, ಅಪ್ಪುವಿನ ಬೃಹತ್ ಕಟೌಟ್ ಗೆ ಎರಡು ಜೆಸಿಬಿ ಗಳ ಮೂಲಕ ಹಾಲಿನ ಅಭಿಷೇಕ ಮಾಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಚಿತ್ರ ವೀಕ್ಷಣೆಗೆ ಬರುವ ಅಭಿಮಾನಿಗಳಿಗೆ ಉಟದ ವ್ಯವಸ್ಥೆ ಮಾಡುತ್ತಿದ್ದಾರೆ. ಜೇಮ್ಸ್ ಪವರ್ ಗಾಗಿ ಅಪ್ಪು ಅಭಿಮಾನಿಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ಪವರ್ ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮೊಂದಿಗಿಲ್ಲವಾದ್ರು ನಮ್ಮ ಹೃದಯದಲ್ಲಿ ನೆಲೆ ನಿಂತಿದ್ದಾರೆ, ಅವರು ಮಾಡಿರೋ ಒಳ್ಳೆ ಕೆಲಸ ಕಾರ್ಯಗಳು ನಮಗೆ ಮಾದರಿ ಅಂತಾ ಪವರ್ ಫ್ಯಾನ್ಸ್, ಮರೆಯಾದ ಕನ್ನಡದ ಮಾಣಿಕ್ಯನ ಜೇಮ್ಸ್ ಹೊಸ ಅವತಾರದಲ್ಲಿ ನೋಡಲು ಪ್ರತಿ ಕ್ಷಣ ಕಾದುಕುಳಿತ್ತಿದ್ದಾರೆ
