Breaking NewsLatestಕಲಬುರ್ಗಿಜಿಲ್ಲಾ ಸುದ್ದಿ
ಪಿಎಸ್ಐ ಪರೀಕ್ಷೆ ಅಕ್ರಮ: 11 ಪೊಲೀಸ್ ಸಿಬ್ಬಂದಿ ಅಮಾನತ್ತು

ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಮತ್ತಷ್ಟು ಪೊಲೀಸರ ತಲೆದಂಡವಾಗಿದೆ. ಕರ್ತವ್ಯ ಲೋಪ ಆರೋಪದಡಿ 11 ಪೊಲೀಸ್ ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಲಾಗಿದೆ….
ಎಂ.ಎಸ್. ಇರಾನಿ ಕಾಲೇಜು ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭದ್ರತಾ ಕೆಲಸಕ್ಕಾಗಿ ನಿಯೋಜನೆಗೊಂಡಿದ್ದ ಪೊಲೀಸ್ 11 ಸಿಬ್ಬಂದಿಗಳನ್ನು ಅಮಾನತ್ತು ಮಾಡಲಾಗಿದೆ…
ಕರ್ತವ್ಯಲೋಪ ಆರೋಪದಡಿ ಇಬ್ಬರು ಎ.ಎಸ್.ಐ ಹಾಗೂ 9 ಪೊಲೀಸ್ ಕಾಸ್ಟೇಬಲ್ ಗಳ ಸಸ್ಪೆಂಡ್ ಆಗಿದ್ದು, ಇನ್ನಷ್ಟು ಪೊಲೀಸರ ತೆಲೆ ದಂಡವಾಗಿವ ಸಾಧ್ಯತೆ ಇದೆ. ಈಗಾಗಲೇ ಡಿಎಸ್ಪಿ ಹಾಗೂ ಪಿಐ ಸಸ್ಪೆಂಡ್ ಆಗಿದ್ದು, ಸಸ್ಪೆಂಡ್ ಆದವರ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ…
