ಪಿಎಸ್ಐ ಪರೀಕ್ಷೆ ಅಕ್ರಮ: ಡಿವೈಸ್ ಬಳಕೆಗೆ ಎಕ್ಸ್‌ಪರ್ಟ್ ಟೀಮ್ ನೇಮಿಸುತ್ತಿದ್ದ ಕಿಂಗ್‌ಪಿನ್!

ಕಲಬುರಗಿ: ಪಿಎಸ್ಐ ಪರೀಕ್ಷೆ ಅಕ್ರಮ ಪ್ರಕರಣ ಆಳಕ್ಕೆ ಸಿಐಡಿ ಇಳಿದಿದೆ. ಆರೋಪಿಗಳು ಹೇಗೆಲ್ಲಾ ಅಕ್ರಮವೆಸಗುತ್ತಿದ್ದರು ಅನ್ನೋದು ಕಂಡು ಸಿಐಡಿ ಅಧಿಕಾರಿಗಳೇ ದಂಗಾಗುವಂತೆ ಮಾಡಿದೆ.
ಅಕ್ರಮದ ಪ್ರಮುಖ ರೂವಾರಿ ಆರ್ ಡಿ ಪಾಟೀಲ್ ಟೀಂ ನಿಂದ ಬ್ಲೂಟೂತ್ ಡಿವೈಸ್ ಬಳಸಿ ಪರೀಕ್ಷೆ ಬರೆಸುತ್ತಿದ್ದರು ಅನ್ನೋದನ್ನು ಈಗಾಗಲೇ ಪತ್ತೆ ಮಾಡಿ ಆರ್.ಡಿ. ಪಾಟೀಲ್, ಮಹಾಂತೇಶ ಪಾಟೀಲ್ ಸೇರಿ ಹಲವರ ಬಂಧನ ಮಾಡಿದ್ದಾರೆ. ಆರೋಪಿಗಳಿಗೆ ಡ್ರಿಲ್ ಮಾಡಿದಾಗ ಒಂದೊಂದೇ ರೋಚಕ ಕಹಾನಿಗಳು ಬಯಲಾಗುತ್ತಿವೆ. ಮ್ಯಾಕ್ರೋ ಬ್ಲೂ ಟೂತ್, ಮೈಕ್ರೋ ಡಿವೈಸ್ ಬಳಸಿ ಅಭ್ಯರ್ಥಿಗಳಿಗೆ ಉತ್ತರ ಹೇಳಲು ಸಿಸ್ಟೋಮ್ಯಾಟಿಕ್ ಪ್ಲಾನ್ ಮಾಡ್ತಿದ್ದರು. ಪರೀಕ್ಷೆ ಅಕ್ರಮಕ್ಕೆ ಡಿವೈಸ್ ಎಕ್ಸಪರ್ಟ್ ಟೀಂ ಬಳಕೆ ಮಾಡುತ್ತಿದ್ದರು. ಬಿಗ್ ಪ್ಲ್ಯಾನ್ ಹಾಕಿಕೊಂಡು ಪರೀಕ್ಷೆಯಲ್ಲಿ ಬ್ರದರ್ಸ್ ಪರ್ಫೆಕ್ಟ್ ಆಗಿ ಎಕ್ಸಿಕ್ಯೂಟ್ ಮಾಡುತ್ತಿದ್ದರು.
ಅಭ್ಯರ್ಥಿಗಳನ್ನು ಹುಡುಕಿ ಹುಡುಕಿ ಆರ್.ಡಿ. ಪಾಟೀಲ್ ಡೀಲ್ ಫಿಕ್ಸ್ ಮಾಡ್ತಿದ್ದ, ಗಮನಾರ್ಹ ಅಂದ್ರೆ ಅಕ್ರಮದಲ್ಲೂ ಪಾಟೀಲ್ ಬ್ರದರ್ಸ್ ಸ್ವಜಾತಿ ಪ್ರೇಮ ಮೆರೆದಿದ್ದಾರೆ. ಪ್ರತಿ ಅಭ್ಯರ್ಥಿಗೆ ಗರಿಷ್ಠ 60 ಲಕ್ಷ ಫಿಕ್ಸ್ ಮಾಡ್ತಿದ್ದ ಆರೋಪಿಗಳು ಸ್ವಜಾತಿ ಅಭ್ಯರ್ಥಿಗಳು ಎಷ್ಟು ಕೊಟ್ಟರು ಸೈ ಎನ್ನುತ್ತಿದ್ದರು. ಶಾಸಕರ ಗನ್‌ಮ್ಯಾನ್ ಹಯ್ಯಾಳಿ ದೇಸಾಯಿ 30 ಲಕ್ಷಕ್ಕೆ ವ್ಯಾಪಾರ ಕುದುರಿಸಿಕೊಂಡಿದ್ದನಂತೆ, ಸಿಐಡಿ ತಂಡಕ್ಕೆ ಬಗೆದಷ್ಟು ರೋಚಕ ಕಹಾನಿಗಳು ಬಿಚ್ಚಿಕೊಳ್ಳುತ್ತಿದೆ. ಡಿವೈಸ್ ಬಳಕೆ ಮಾಡಿ ಪಾಸಾದ ಮೂವರು ಅಭ್ಯರ್ಥಿಗಳು ಸಿಐಡಿ ಬಲೆಗೆ ಬಿದ್ದಿದ್ದು, ಮತ್ತಷ್ಟು ಅಭ್ಯರ್ಥಿಗಳು ಪರೀಕ್ಷೆ ಅಕ್ರಮದಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.
