Breaking NewsLatestಜಿಲ್ಲಾ ಸುದ್ದಿಬೆಂಗಳೂರುರಾಜ್ಯಸುದ್ದಿ

ಕೆಂಪೇಗೌಡರ ಪೇಟ ತೊಟ್ಟು ಕಂಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರಿನಲ್ಲಿ ವಂದೇ ಭಾರತ್ ಎಕ್ಸ್​ಪ್ರೆಸ್, ಕೆಂಪೇಗೌಡರ ಪುತ್ಥಳಿ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ಉದ್ಘಾಟನೆ ಮಾಡಿರುವ ಪ್ರಧಾನಿ ಮೋದಿ ಅವರಿಗೆ ಕೆಂಪೇಗೌಡರು ಧರಿಸುತ್ತಿದ್ದ ರೀತಿಯ ವಿಶೇಷವಾದ ಪೇಟವನ್ನು ಉಡುಗೊರೆಯಾಗಿ ನೀಡಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕೆಂಪೇಗೌಡ ಪೇಟವನ್ನು ಪ್ರಧಾನಿ ಮೋದಿಗೆ ತೊಡಿಸಿದ್ದಾರೆ. ಈ ವೇಳೆ ನಿರ್ಮಲಾನಂದನಾಥ ಸ್ವಾಮೀಜಿ ಆ ಪೇಟದ ಮಹತ್ವದ ಬಗ್ಗೆ ನರೇಂದ್ರ ಮೋದಿಯವರಿಗೆ ತಿಳಿಸಿಕೊಟ್ಟಿದ್ದಾರೆ. ಕೆಂಪು ಬಣ್ಣದ ಈ ವಿಶೇಷ ಪೇಟವನ್ನು ಮೈಸೂರಿನ ಕಲಾವಿದ ನಂದನ್ ಎಂಬುವವರು ತಯಾರಿಸಿದ್ಧಾರೆ. ಕಲಾವಿದ ನಂದನ್ ಈ ಪೇಟ ತಯಾರಿಗೆ 10 ದಿನ ತೆಗೆದುಕೊಂಡಿದ್ದಾರೆ. ಬನಾರಸ್ ರೇಷ್ಮೆ ಬಟ್ಟೆ ಬಳಸಿ ಈ ಪೇಟವನ್ನು ತಯಾರಿಸಲಾಗಿದೆ. ಕೆಂಪು ಬಣ್ಣದ ಪೇಟದಲ್ಲಿ ರೇಷ್ಮೆ, ಗರಿ, ಮುತ್ತುಗಳು ಸೇರಿ ಸೂಕ್ಷ್ಮ ಕುಸುರಿ ಕೆಲಸ ಇದರಲ್ಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button