ಘನ ತ್ಯಾಜ್ಯ ಆಧಾರಿತ ಗೋಬರ್-ಧನ್ ಸ್ಥಾವರ ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಪುರಸಭೆಯ ಘನ ತ್ಯಾಜ್ಯ ಆಧಾರಿತ ಗೋಬರ್-ಧನ್ ಸ್ಥಾವರವನ್ನ ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ದೇಶದ 75 ದೊಡ್ಡ ನಾಗರಿಕ ಸಂಸ್ಥೆಗಳಲ್ಲಿ ಗೋಬರ್-ಧನ್ ಸ್ಥಾವರದಂಥ ಜೈವಿಕ ಸಿಎನ್‌ಜಿ ಸ್ಥಾವರಗಳನ್ನ ಮುಂದಿನ ಎರಡು ವರ್ಷಗಳಲ್ಲಿ ನಿರ್ಮಾಣ ಮಾಡುವ ಗುರಿಯೊಂದಿಗೆ ಕೆಲಸ ನಡೆಯುತ್ತಿದೆ ಅದಕ್ಕಾಗಿ ನನಗೆ ಸಂತಸವಾಗಿದೆ. ದೇಶದ ನಗರಗಳನ್ನು ಸ್ವಚ್ಛ, ಮಾಲಿನ್ಯ ಮುಕ್ತಗೊಳಿಸಲು ಮತ್ತು ಅವುಗಳನ್ನು ಶುದ್ಧ ಶಕ್ತಿಯತ್ತ ಕೊಂಡೊಯ್ಯಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಗೋಬರ್-ಧನ್ ಸ್ಥಾವರ :
150 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಗೋಬರ್ ಧನ್ ಸ್ಥಾವರವು. ಶೇ 100 ರಷ್ಟು ಆರ್ದ್ರ ತ್ಯಾಜ್ಯದ ಮೂಲಕ ಜೈವಿಕ ಅನಿಲವನ್ನು ಉತ್ಪಾದಿಸಲಾಗುತ್ತದೆ. ಸ್ಥಾವರವು ಶೇಕಡಾ 96 ರಷ್ಟು ನಷ್ಟು ಶುದ್ಧ ಮೀಥೇನ್ ಅನಿಲದೊಂದಿಗೆ ಸಿಎನ್‌ಜಿ ಅನ್ನು ಉತ್ಪಾದಿಸುತ್ತದೆ. ಅಷ್ಟೇ ಅಲ್ಲದೇ ದಿನಕ್ಕೆ 550 ಮೆಟ್ರಿಕ್ ಟನ್‌ಗಳನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಪ್ರತಿದಿನ 17,500 ಕೆಜಿ ಜೈವಿಕ ಅನಿಲ ಮತ್ತು 100 ಟನ್ ಉತ್ತಮ ಗುಣಮಟ್ಟದ ಮಿಶ್ರಗೊಬ್ಬರವನ್ನು ಉತ್ಪಾದಿಸಬಹುದಾಗಿದೆ. ಇಂದೋರ್‌ನಲ್ಲಿ ಸುಮಾರು 400 ಬಸ್‌ಗಳು ಶೀಘ್ರದಲ್ಲೇ ಸ್ಥಾವರದಲ್ಲಿ ಉತ್ಪತ್ತಿಯಾಗುವ ಜೈವಿಕ ಅನಿಲದಿಂದ ಚಲಿಸಲಿವೆ. ವಾರ್ಷಿಕವಾಗಿ 1,30,000 ಟನ್ ಇಂಗಾಲದ ಡೈಆಕ್ಸೈಡ್ ಅನ್ನು ತಗ್ಗಿಸುವ ಮೂಲಕ ಜನನಿಬಿಡ ನಗರಗಳ ಗಾಳಿಯ ಗುಣಮಟ್ಟವನ್ನು ಶುದ್ಧೀಕರಿಸಬಹುದಾಗಿದೆ.
