Breaking NewsLatestರಾಜಕೀಯರಾಜ್ಯ

ಆರಗ ಗೃಹ, ಸುನೀಲ್ ಕುಮಾರ್ ಇಂಧನ, ಕೋಟ ಸಮಾಜಕಲ್ಯಾಣ; ಹಳಬರಲ್ಲಿ ಹೆಚ್ಚಿನವರ ಖಾತೆ ಬದಲಿಲ್ಲ

ಬೆಂಗಳೂರು: ಬೊಮ್ಮಾಯಿ ಸಂಪುಟದ 29 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಪ್ರಮಾಣವಚನ ಸ್ವೀಕರಿಸಿದ ನಾಲ್ಕು ದಿನಗಳ ಬಳಿಕ ಸಚಿವರಿಗೆ ಖಾತೆ ಹಂಚಿಕೆಯಾಗಿದೆ.

ಹಣಕಾಸು, ಬೆಂಗಳೂರು ಅಭಿವೃದ್ಧಿ ಖಾತೆಗಳನ್ನು ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.

ಬಿಎಸ್​ವೈ ಸಂಪುಟದಲ್ಲಿದ್ದ ಬಹುತೇಕ ಸಚಿವರಿಗೆ ಮೊದಲು ಅವರು ಹೊಂದಿದ್ದ ಖಾತೆಯನ್ನೇ ನೀಡಲಾಗಿದೆ. ಹೊಸದಾಗಿ ಸಂಪುಟಕ್ಕೆ ಬಂದವರಲ್ಲಿ ಆರ್​ಎಸ್​ಎಸ್​ ಹಿನ್ನೆಲೆಯಿಂದ ಬಂದವರಿಗೆ ಪ್ರಮುಖ ಖಾತೆಗಳನ್ನು ನೀಡಲಾಗಿದೆ.

ಅದರಂತೆ ಅರಗ ಜ್ಞಾನೇಂದ್ರ ಅವರಿಗೆ ಗೃಹ, ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಮಾಜಕಲ್ಯಾಣ, ವಿ ಸುನೀಲ್ ಕುಮಾರ್ ಅವರಿಗೆ ಇಂಧನ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊಣೆ ನೀಡಲಾಗಿದೆ.

ಸಿ ಸಿ ಪಾಟೀಲ್ ಅವರಿಗೆ ಲೋಕೋಪಯೋಗಿ ಖಾತೆ ಹೊಣೆ ಸಿಕ್ಕಿದೆ. ಬಿ ಸಿ ನಾಗೇಶ್ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಕೊಡಲಾಗಿದೆ.

ಉಳಿದಂತೆ ಗೋವಿಂದ ಕಾರಜೋಳ ಅವರಿಗೆ ಜಲಸಂಪನ್ಮೂಲ, ಈಶ್ಗರಪ್ಪ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಆರ್ ಅಶೋಕ್ ಅವರಿಗೆ ಕಂದಾಯ, ಸೋಮಣ್ಣ ಅವರಿಗೆ ವಸತಿ, ಡಾ. ಕೆ ಸುಧಾಕರ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಖಾತೆ, ಡಾ. ಅಶ್ವತ್ಥ್​ನಾರಾಯಣ ಅವರಿಗೆ ಉನ್ನತ ಶಿಕ್ಷಣ ಖಾತೆಯ ಜವಾಬ್ದಾರಿಯನ್ನೇ ಪುನಃ ನೀಡಲಾಗಿದೆ.

ಲಕ್ಷ್ಮಣ ಸವದಿ ಬಳಿಯಿದ್ದ ಸಾರಿಗೆ ಇಲಾಖೆಯ ಹೊಣೆಯನ್ನು ಶ್ರೀರಾಮುಲು ಅವರಿಗೆ ನೀಡಲಾಗಿದೆ. ಹೊಸದಾಗಿ ರಚಿಸಲಾದ ಪರಿಶಿಷ್ಟ ಪಂಗಡ ಕಲ್ಯಾನ ಇಲಾಖೆಯ ಹೊಣೆ ಕೂಡ ಶ್ರೀರಾಮುಲು ಹೆಗಲೇರಿದೆ. ಉಮೇಶ್ ಕತ್ತಿ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಜೊತೆಗೆ ಅರಣ್ಯ ಖಾತೆ ಹೊಣೆ ನೀಡಲಾಗಿದೆ.

ಜೆ ಸಿ ಮಾಧುಸ್ವಾಮಿ ಅವರಿಗೆ ಸಣ್ಣ ನೀರಾವರಿ, ಜೊತೆಗೆ ಕಾನೂನು ಮತ್ತು ಸಂಸದೀಯ ಖಾಲೆ ಹೊಣೆ ಕೊಡಲಾಗಿದೆ. ಎಂಟಿಬಿ ನಾಗರಾಜ್​ಗೆ ಪೌರಾಡಳಿತ, ಸಣ್ಣ ಕೈಗಾರಿಕೆ, ಸಾರ್ವಜನಿಕ ವಲಯ ಕೈಗಾರಿಕೆ, ಅಂಗಾರ ಅವರಿಗೆ ಮೀನುಗಾರಿಕೆ, ಗೋಪಾಲಯ್ಯಗೆ ಅಬಕಾರಿ, ಶಶಿಕಲಾ ಜೊಲ್ಲೆ ಅವರಿಗೆ ಮುಜರಾಯಿ, ಹಾಲಪ್ಪ ಆಚಾರ್ ಅವರಿಗೆ ಗಣಿ ಮತ್ತು ಭೂವಿಜ್ಞಾನ ಖಾತೆ ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ನೀಡಲಾಗಿದ್ದರೆ, ಶಿವರಾಂ ಹೆಬ್ಬಾರ ಅವರಿಗೆ ಕಾರ್ಮಿಕ ಖಾತೆ ಹೊಣೆಗಾರಿಕೆಯನ್ನೇ ಮುಂದುವರಿಸಲಾಗಿದೆ.

ಈ ಮೊದಲು ಗಣಿ ಮತ್ತು ಭೂವಿಜ್ಞಾನ ಖಾತೆ ಹೊಂದಿದ್ದ ಮುರುಗೇಶ್ ನಿರಾಣಿ ಅವರಿಗೆ ಈಗ ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಖಾತೆ ಲಭಿಸಿದೆ.

ಸಚಿವರ ಖಾತೆಗಳ ವಿವರ:

1.ಕೆ.ಎಸ್.ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

2.ಆರ್.ಅಶೋಕ್ – ಕಂದಾಯ

3.ಬಿಸಿ ಪಾಟೀಲ್ – ಕೃಷಿ

4.ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ

5.ಬಿ.ಶ್ರೀ ರಾಮುಲು – ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ

6.ಉಮೇಶ್ ಕತ್ತಿ – ಆಹಾರ ಮತ್ತು ನಾಗರಿಕ ಪೂರೈಕೆ, ಅರಣ್ಯ

7.ಎಸ್.ಟಿ.ಸೋಮಶೇಖರ್ – ಸಹಕಾರ

8.ಡಾ.ಕೆ.ಸುಧಾಕರ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ

9.ಬೈರತಿ‌ ಬಸವರಾಜ – ನಗರಾಭಿವೃದ್ಧಿ

10.ಮುರುಗೇಶ್ ನಿರಾಣಿ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ

11.ಶಿವರಾಂ ಹೆಬ್ಬಾರ್ – ಕಾರ್ಮಿಕ

12.ಶಶಿಕಲಾ ಜೊಲ್ಲೆ – ಮುಜರಾಯಿ, ಹಜ್ ಮತ್ತು ವಕ್ಫ್

13.ಕೆಸಿ ನಾರಾಯಣ್ ಗೌಡ – ರೇಷ್ಮೆ, ಯುವಜನ ಮತ್ತು ಕ್ರೀಡೆ

14.ವಿ ಸುನೀಲ್ ಕುಮಾರ್ – ಇಂಧನ, ಕನ್ನಡ ಮತ್ತು ಸಂಸ್ಕೃತಿ

15.ಅರಗ ಜ್ಞಾನೇಂದ್ರ – ಗೃಹ

16.ಗೋವಿಂದ ಕಾರಜೋಳ-ಜಲಸಂಪನ್ಮೂಲ

17.ಮುನಿರತ್ನ- ತೋಟಗಾರಿಕೆ, ಯೋಜನೆ

18.ಎಂ.ಟಿ.ಬಿ ನಾಗರಾಜ್ – ಪೌರಾಡಳಿತ, ಸಣ್ಣ ಕೈಗಾರಿಕೆ, ಸಾರ್ವಜನಿಕ ವಲಯ ಕೈಗಾರಿಕೆ

19.ಗೋಪಾಲಯ್ಯ – ಅಬಕಾರಿ

20.ಮಾಧುಸ್ವಾಮಿ – ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ

21.ಹಾಲಪ್ಪ ಆಚಾರ್ – ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ

22.ಶಂಕರ್ ಪಾಟೀಲ್ ಮುನೇನಕೊಪ್ಪ – ಕೈಮಗ್ಗ, ಜವಳಿ

23.ಕೋಟ ಶ್ರೀನಿವಾಸ ಪೂಜಾರಿ – ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಅಭಿವೃದ್ಧಿ

24.ಪ್ರಭು ಚೌವ್ಹಾಣ್ – ಪಶು ಸಂಗೋಪನೆ

25.ವಿ ಸೋಮಣ್ಣ – ವಸತಿ, ಮೂಲಭೂತ ಸೌಕರ್ಯ ಅಭಿವೃದ್ಧಿ

26.ಎಸ್ ಅಂಗಾರ – ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ

27.ಆನಂದ್ ಸಿಂಗ್ – ಪರಿಸರ, ಪ್ರವಾಸೋದ್ಯಮ

28.ಸಿ ಸಿ‌ ಪಾಟೀಲ್ – ಲೋಕೋಪಯೋಗಿ

29.ಬಿಸಿ ನಾಗೇಶ್ – ಪ್ರಾಥಮಿಕ ಮತತ್ಉ ಪ್ರೌಢ ಶಿಕ್ಷಣ, ಸಕಾಲ

Spread the love

Related Articles

Leave a Reply

Your email address will not be published. Required fields are marked *

Back to top button