Breaking NewsLatestರಾಷ್ಟ್ರೀಯಸುದ್ದಿ

ಪಿಎಂ ಭದ್ರತಾ ಲೋಪ, ಸುಪ್ರೀಂಕೋರ್ಟ್ ನಲ್ಲಿ ನಾಳೆ ವಿಚಾರಣೆ

ನವದೆಹಲಿ, ಜ 6 ಪಂಜಾಬಿನ ಭೇಟಿ ಸಮಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭದ್ರತೆಗೆ ಲೋಪ ಉಂಟಾಗಿರುವ ವಿಚಾರ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು ಪಂಜಾಬಿನಲ್ಲಿ ಪ್ರಧಾನಮಂತ್ರಿಯವರ ಭದ್ರತೆಗೆ ಲೋಪ ಉಂಟಾಗಿರುವ ಬಗ್ಗೆ ಕೋರ್ಟ್ ಮೊರೆಹೋಗಿ ಇನ್ನು ಮುಂದೆ ಯಾವುದೇ ಸಂದರ್ಭದಲ್ಲೂ ರಾಜ್ಯಗಳ ಭೇಟಿ ಸಮಯದಲ್ಲಿ ಇಂತಹ ಪರಿಸ್ಥಿತಿ ಮರುಕಳಿಸಬಾರದು ಎಂದೂ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ .ವಿ ರಮಣ ಮೊದಲ ಆದ್ಯತೆಯ ಮೇರೆಗೆ ನಾಳೆ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಇಂದಿನ ವಿಚಾರಣೆಯನ್ನು ಮುಂದೂಡಿದರು.
ಈ ನಡುವೆ ಘಟನೆ ಬಗ್ಗೆ ತನಿಖೆ ನಡೆಸಲು ಪಂಜಾಬ್ ಸರ್ಕಾರ ಉನ್ನತ ಮಟ್ಟದ ಸಮಿತಿ ನೇಮಕ ಮಾಡಿದ್ದು ಮೂರು ದಿನಗಳ ಒಳಗೆ ವರದಿ ಸಲ್ಲಿಸಲಿದೆ ಎಂದು ಹೇಳಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button