Breaking NewsLatestರಾಷ್ಟ್ರೀಯಸುದ್ದಿ
ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಮೋದಿ

ಗುಜರಾತ್ ತಲುಪಿದ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ರ್ಯಾಲಿ ಆರಂಭಿಸುವ ಮುನ್ನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ದೇವಾಲಯದ ದರ್ಶನದ ನಂತರ ಅವರು ವೆರಾವಲ್ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ವೆರಾವಲ್ ಮೀನುಗಾರಿಕೆ ಉದ್ಯಮಗಳ ಕೇಂದ್ರವಾಗಿದೆ. ಇದಾದ ನಂತರ ಧೋರಾಜಿ, ಅಮ್ರೇಲಿ ಮತ್ತು ಬೊಟಾಡ್‌ನಲ್ಲಿ ಇನ್ನೂ ಮೂರು ಚುನಾವಣಾ ರ್ಯಾಲಿಗಳು ನಡೆಯಲಿವೆ.ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್ ಮಾಡಿರುವ ವಿಡಿಯೊದಲ್ಲಿ ಮೋದಿ ಅವರು ಸೋಮನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ತೋರಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಕೂಡಾ ಗುಜರಾತ್ ನಲ್ಲಿದ್ದಾರೆ. ಗುಜರಾತ್ ನಲ್ಲಿ ಎರಡು ಹಂತಗಳಾಗಿ ಡಿಸೆಂಬರ್ 1 ಮತ್ತು ಡಿಸೆಂಬರ್ 5 ರಂದು ಮತದಾನ ನಡೆಯಲಿದೆ.ಡಿಸೆಂಬರ್ 8 ರಂದು ಮತಗಳ ಎಣಿಕೆ ನಡೆಯಲಿದೆ. ಹಿಮಾಚಲ ಪ್ರದೇಶದ ಮತಗಳ ಎಣಿಕೆಯೂ ಅದೇ ದಿನ ನಡೆಯಲಿದೆ.
