Breaking NewsLatestರಾಜಕೀಯರಾಷ್ಟ್ರೀಯಸುದ್ದಿ

ಬಿಜೆಪಿ ನಿಧಿಗೆ ಸಾವಿರ ರೂಪಾಯಿ ದೇಣಿಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನವಾದ ಇಂದು ಬಿಜೆಪಿ ವಿಶೇಷ  ದೇಣಿಗೆ ಶಿಬಿರ ಆರಂಭಿಸಿದ್ದು , ಪ್ರಧಾನಿ  ನರೇಂದ್ರ ಮೋದಿ ಸಾವಿರ ರೂಪಾಯಿ  ದೇಣಿಗೆ ನೀಡಿದ್ದಾರೆ. ದೇಣಿಗೆ ಅಭಿಯಾನ ಬರುವ ಫೆ.11 ವರೆಗೂ ಮುಂದುವರೆಯಲಿದೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. “ಭಾರತೀಯ ಜನತಾ ಪಕ್ಷದ ಪಕ್ಷದ ನಿಧಿಗೆ ನಾನು 1ಸಾವಿರ ರುಪಾಯಿ  ದೇಣಿಗೆನೀಡಿದ್ದೇನೆ. ದೇಶಕ್ಕೆ ಮೊದಲ ಆದ್ಯತೆ ನೀಡುವುದು ನಮ್ಮ ಅದರ್ಶ. ನೀವು ನೀಡುವ ದೇಣಿಗೆಯಿಂದ ನಿಸ್ವಾರ್ಥ ಸೇವೆ ಬಲವಾಗಲಿದೆ,. ಬಿಜೆಪಿ ಬಲಪಡಿಸಲು  ಸಹಕರಿಸಿ. ಈ ಮೂಲಕ ಭಾರತ ಬಲಿಷ್ಠಗೊಳಿಸಲು ನೆರವಾಗಿ  ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಈ ನಡುವೆ ಕೇಂದ್ರ  ಗೃಹ ಸಚಿವ ಅಮಿತ್ ಷಾ ಟ್ವೀಟ್ ಮಾಡಿ  , ಬಿಜೆಪಿಗೆ  ನೀಡುವ ದೇಣಿಗೆಯು  ನವ ಭಾರತಕ್ಕೆ ಕೊಡುಗೆಯಾಗಲಿದೆ.  ನಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ದೇಣಿಗೆ ನೀಡಿ ಜೊತೆಗೆ ಇತರರಿಗೂ  ಸ್ಫೂರ್ತಿ ನೀಡುವಂತೆ  ಮನವಿ ಮಾಡುತ್ತೇನೆ  ಎಂದು ಮನವಿ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button