Breaking NewsLatestರಾಷ್ಟ್ರೀಯಸುದ್ದಿ

ಇಂದಿನಿಂದ 2 ದಿನ ಪ್ರಧಾನಿ ಮೋದಿ ಗುಜರಾತ್ ಪ್ರವಾಸ

ನವದೆಹಲಿ: ಇಂದಿನಿಂದ 2 ದಿನ ಪ್ರಧಾನಿ ನರೇಂದ್ರ ಮೋದಿ ತಮ್ಮ ತವರು ರಾಜ್ಯವಾದ ಗುಜರಾತ್​​ಗೆ ಭೇಟಿ ನೀಡಲಿದ್ದಾರೆ.

ಈ ವೇಳೆ 15,670 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ರಕ್ಷಣಾ ಇಲಾಖೆ ಉತ್ಪಾದನಾ ಸಾಮರ್ಥ್ಯದ ಪ್ರದರ್ಶನ ಮಾಡುವ ಡಿಫ್​​​ಎಕ್ಸ್​​ಪೋ-22 ಅನ್ನು ಮೋದಿ ಉದ್ಘಾಟಿಸಲಿದ್ದಾರೆ. 2 ದಿನಗಳ ಗುಜರಾತ್ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಗಾಂಧಿನಗರ, ಜುನಾಗಢ್, ರಾಜ್‌ಕೋಟ್, ಕೆವಾಡಿಯಾ ಮತ್ತು ವ್ಯಾರಾಗೆ ಭೇಟಿ ನೀಡಲಿದ್ದಾರೆ.

ಇಂದು (ಬುಧವಾರ) ಬೆಳಗ್ಗೆ 9.45ರ ಸುಮಾರಿಗೆ ಗಾಂಧಿನಗರದಲ್ಲಿ ಡಿಫೆನ್ಸ್ ಎಕ್ಸ್‌ಪೋ-22ನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಇದು ಇಲ್ಲಿಯವರೆಗೆ ನಡೆದ ಭಾರತೀಯ ರಕ್ಷಣಾ ಎಕ್ಸ್‌ಪೋದಲ್ಲಿ ಅತಿ ದೊಡ್ಡ ಎಕ್ಸ್​ಪೋ ಆಗಲಿದೆ. ಈ ಕಾರ್ಯಕ್ರಮವು ಭಾರತೀಯ ರಕ್ಷಣಾ ಉತ್ಪಾದನಾ ಸಾಮರ್ಥ್ಯದ ವಿಸ್ತಾರವಾದ ವ್ಯಾಪ್ತಿ ಮತ್ತು ಪ್ರಮಾಣವನ್ನು ಪ್ರದರ್ಶಿಸುತ್ತದೆ. ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ವಿನ್ಯಾಸಗೊಳಿಸಿದ ಸ್ವದೇಶಿ ತರಬೇತುದಾರ ವಿಮಾನವಾದ HTT-40 ಅನ್ನು ಅನಾವರಣಗೊಳಿಸಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button