Breaking NewsLatestರಾಷ್ಟ್ರೀಯಸುದ್ದಿ
ಬ್ರಿಟನ್ ಪ್ರಧಾನಿ ಸುನಕ್ ಜೊತೆ ಪ್ರಧಾನಿ ಮೋದಿ ಮಾತು

ನವದೆಹಲಿ: ಬ್ರಿಟನ್ ನ ನೂತನ ಪ್ರಧಾನಿ ರಿಷಿ ಸುನಕ್ ಜೊತೆ ಪ್ರಧಾನಿ ನರೇಂದ್ರ ಮೋದಿ ಅ.27 ರಂದು ಮಾತನಾಡಿದ್ದಾರೆ. ಉಭಯ ನಾಯಕರೂ ಉಭಯ ರಾಷ್ಟ್ರಗಳ ನಡುವೆ ಸಮಗ್ರ ಹಾಗೂ ಸಮತೋಲಿತ ಮುಕ್ತ ವ್ಯಾಪಾರ ಒಪ್ಪಂದವನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಸುನಕ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಜೊತೆ ಅವರು ಮಾತನಾಡಿದ್ದಾರೆ. ಟ್ವೀಟ್ ಮಾಡಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿರುವ ಸುನಕ್, ಎರಡು ಶ್ರೇಷ್ಠ ಪ್ರಜಾಪ್ರಭುತ್ವ ದೇಶಗಳು ಮುಂಬರುವ ದಿನಗಳಲ್ಲಿ ಭದ್ರತೆ, ರಕ್ಷಣೆ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದರೆ ಸಾಧಿಸಬಹುದಾದ ಅಂಶಗಳ ಕುರಿತು ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ.
