ತೈಲದ ಮೌಲ್ಯವರ್ಧಿತ ತೆರಿಗೆ ಕಡಿತಗೊಳಿಸಿದ 22 ರಾಜ್ಯಗಳು

ನವದೆಹಲಿ: ದೇಶದ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಕಡಿತಗೊಳಿಸಿವೆ ಎಂದು ಕೇಂದ್ರ ತೈಲ ಸಚಿವಾಲಯ ತಿಳಿಸಿದೆ.
ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ಮಹಾರಾಷ್ಟ್ರ ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ಸೇರಿದಂತೆ 14 ರಾಜ್ಯಗಳು ವ್ಯಾಟ್ ಕಡಿತಗೊಳಿಸಿಲ್ಲ. ಕೆಲ ರಾಜ್ಯಗಳು ತಕ್ಷಣಕ್ಕೆ ವ್ಯಾಟ್ ಕಡಿತಗೊಳಿಸಲು ನಿರಾಕರಿಸಿವೆ ಎಂದು ಸಚಿವಾಲಯ ತಿಳಿಸಿದೆ.
ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಇಳಿಸಿದ ನಂತರ ಲೆಹ್ನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬೆಲೆ ಇಳಿಕೆಯಾಗಿದೆ.ಪೆಟ್ರೋಲ್ ಬೆಲೆ ಲೀಟರ್ಗೆ ರೂ. 13.43 ಮತ್ತು ಡಿಸೇಲ್ ಬೆಲೆ ರೂ.19.61 ರಷ್ಟು ಇಳಿಕೆಯಾಗಿದೆ.
ಒಡಿಶಾ ಸರ್ಕಾರ ಶುಕ್ರವಾರ ಮಧ್ಯರಾತ್ರಿಯಿಂದ ಪ್ರತೀ ಲೀಟರ್ ಮೇಲಿನ ವ್ಯಾಟ್ ತೆರಿಗೆಯನ್ನು 3 ರೂಪಾಯಿಯಷ್ಟು ಕಡಿತಗೊಳಿಸಿದೆ. ಮಧ್ಯಪ್ರದೇಶದಲ್ಲಿ ಶೇ.4ರಷ್ಟು ವ್ಯಾಟ್ ಕಡಿತಗೊಳಿಸಿರುವುದಾಗಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪ್ರಕಟಿಸಿದ್ದಾರೆ. ಭೋಪಾಲ್ನಲ್ಲಿ ಪೆಟ್ರೋಲ್ ಬೆಲೆ ರೂ.107.21 ಹಾಗೂ ಡಿಸೇಲ್ ಬೆಲೆ ರೂ.90.86 ಆಗಲಿದೆ.
