Breaking NewsLatestರಾಜ್ಯರಾಷ್ಟ್ರೀಯಸುದ್ದಿ

ವಾಹನ ಸವಾರರಿಗೆ ಮತ್ತೆ ಶಾಕ್: 2ನೇ ದಿನವೂ ಏರಿದ ಪೆಟ್ರೋಲ್, ಡೀಸೆಲ್ ದರ

ಜನಸಾಮಾನ್ಯರ ಜೇಬಿಗೆ ಸರ್ಕಾರ ಮತ್ತೆ ಮತ್ತೆ ಕತ್ತರ ಪ್ರಯೋಗಿಸುತ್ತಲೇ ಇದೆ. ನಿನ್ನೆ ತಾನೇ ಎಲ್ ಪಿ ಜಿ ಸಿಲಿಂಡರ್, ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯಿಂದ ಕಂಗಲಾಗಿದ್ದ ಜನತೆಗೆ ಇಂದು ಮತ್ತೆ ಶಾಕ್ ಆಗಿದೆ. ಬುಧವಾರ ಕೂಡ ಪೆಟ್ರೋಲ್, ಡೀಸೆಲ್ ಬೆಲೆ 80ಪೈಸೆ ಹೆಚ್ಚಳವಾಗಿದೆ.

ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ಇಂದು ಬೆಂಗಳೂರಿನಲ್ಲಿ ಪೆಟ್ರೋಲ್‌ ಲೀಟರ್‌ಗೆ 102.26 ರೂಪಾಯಿ ಇದ್ದರೆ, ಡೀಸೆಲ್‌ ದರ 85.80 ರೂಪಾಯಿ ಆಗಿದೆ.

ದಿಲ್ಲಿಯಲ್ಲಿ ಇಂದು ಲೀಟರ್‌ ಪೆಟ್ರೋಲ್‌ ದರ 96.21 ರೂ.ನಿಂದ 97.01 ರೂ.ಗೆ ಏರಿಕೆಯಾಗಿದ್ರೆ, ಡೀಸೆಲ್‌ ದರ ಲೀಟರ್‌ಗೆ 86.67 ರೂ.ನಿಂದ 88.27 ರೂ.ಗೆ ಏರಿಕೆಯಾಗಿದೆ.

ಮುಂಬೈನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 111.67 ರೂ.ಗೆ ತಲುಪಿದ್ರೆ, ಡೀಸೆಲ್‌ 95.85 ರೂ. ಗಡಿ ಮುಟ್ಟಿದೆ. ನವೆಂಬರ್ ಆರಂಭದಿಂದ ಇಲ್ಲಿಯವರೆಗೆ ಕಚ್ಚಾ ತೈಲ ದರದಲ್ಲಿ ಸುಮಾರು ಶೇ. 40ರಷ್ಟು ಏರಿಕೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ದರ ಏರಿಕೆಯಾಗುವ ಎಲ್ಲಾ ಸಾಧ್ಯತೆಗಳು ಇವೆ ಎನ್ನಲಾಗ್ತಿದೆ.

Related Articles

Leave a Reply

Your email address will not be published. Required fields are marked *

Back to top button