Breaking NewsLatestವಿದೇಶಸುದ್ದಿ

ಭಾರತದ ಮಿಸೈಲ್ ಪಾಕ್ ನೆಲದಲ್ಲಿ ಪತ್ತೆ: ಇದು ಗಡಿ ಉಲ್ಲಂಘನೆ ಎಂದ ಐಎಸ್ ಪಿ ಆರ್ ಡಿಜಿ

ಭಾರತದ ವಿರುದ್ಧ ಪಾಕಿಸ್ತಾನ ಗಂಭೀರ ಆರೋಪ ಮಾಡಿದೆ. ಭಾರತಕ್ಕೆ ಸೇರಿದ ಸೂಪರ್ ಸಾನಿಕ್ ಮಿಸೈಲ್ ನಮ್ಮ ಗಡಿಯಲ್ಲಿ ಬಿದ್ದಿದೆ ಎಂದು ಪಾಕಿಸ್ತಾನ ಪ್ರಕಟಣೆ ಬಿಡುಗಡೆ ಮಾಡಿದೆ. ಜೊತೆಗೆ ಇದು ಶಾಂತಿಯ ಉಲ್ಲಂಘನೆ ಆಗುತ್ತದೆ, ಇದರ ಮೇಲೆ ಭಾರತ ವಿವರಣೆಯನ್ನು ನೀಡಬೇಕು ಎಂದು ಪಾಕಿಸ್ತಾನ ತಿಳಿಸಿದೆ.

ಬುಧವಾರ ಸಂಜೆ ಹರಿಯಾಣದ ಸಿನ್ರಾ ಪ್ರದೇಶದಿಂದ ಸೂಪರ್ ಸಾನಿಕ್ ಮಿಸೈಲ್ ಪಾಕಿಸ್ತಾನದ ಗಡಿ ಪ್ರದೇಶದಿಂದ ಸುಮಾರು 124 ಕಿಮೀ ದೂರದಲ್ಲಿ ಬಂದು ಪತನವಾಗಿದೆ. ನಾಗರೀಕ ವಿಮಾನಗಳು ಹಾರಾಟ ಮಾಡುವ ಎತ್ತರದಲ್ಲೇ ಮಿಸೈಲ್ ಹಾರಿ ಬಂದಿದ್ದು ಜನ ವಸತಿ ಇರೋ ಪ್ರದೇಶದಲ್ಲಿ ಪತನವಾಗಿದೆ ಎಂದು ಪಾಕಿಸ್ತಾನ ತಿಳಿಸಿದೆ.

ಈ ಬಗ್ಗೆ ಐಎಸ್ ಪಿ ಆರ್ ಡಿಜಿ ಬಾಬರ್ ಇಫ್ತಿಕರ್ ಸುದ್ದಿಗೋಷ್ಟಿ ನಡೆಸಿದ್ದು ಭಾರತ ಗಡಿಯಿಂದ ಹಾರಿ ಬಂದು ಪತನಗೊಂಡಿರುವ ಮಿಸೈಲ್ ನ ವಸ್ತುಗಳನ್ನು ಪಾಕಿಸ್ತಾನ ವೈಮಾನಿಕ ದಳದ ಡಿಫೆನ್ಸ್ ಆಫರೇಷನ್ಸ್ ಸೆಂಟರ್ ವಶಕ್ಕೆ ಪಡೆದುಕೊಂಡಿದೆ. ಇದು ಪಾಕಿಸ್ತಾನ ವಾಯುಗಡಿಯನ್ನು ಉಲ್ಲಂಘಿಸಿದಂತೆ. ಆದರೆ ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಗೋಡೆಗೆ ಮಿಸೈಲ್ ಬಂದು ಬಿದ್ದ ಪರಿಣಾಮ ಗೋಡೆ ಉರುಳಿ ಬಿದ್ದಿದೆ ಎಂದಿದ್ದಾರೆ. ಆದರೆ ಸರ್ಕಾರದ ಆರೋಪದ ಕುರಿತಾಗಿ ಭಾರತ ಸೇನೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button