Breaking NewsLatestರಾಜ್ಯಸುದ್ದಿ

ಕುಕ್ಕೆಯಲ್ಲಿ ಲಕ್ಷ ದೀಪೋತ್ಸವ : ಸಾವಿರಕ್ಕೂ ಹೆಚ್ಚು ಭಜನಾ ತಂಡ ಭಾಗಿ

ಸುಬ್ರಹ್ಮಣ್ಯರಾಜ್ಯದ ಅತ್ಯಂತ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 2022-23ನೇ ವರ್ಷದ ವಾರ್ಷಿಕ ಚಂಪಾಷಷ್ಠಿ ಮಹೋತ್ಸವವು ನ.21ರಂದು ಕಾರ್ತಿಕ ದ್ವಾದಶಿಯಂದು ಬೆಳಗ್ಗೆ ಕೊಪ್ಪರಿಗೆ ಏರುವ ಮೂಲಕ ಆರಂಭವಾಗಲಿದೆ.

ನ.25 ಮಾರ್ಗಶಿರ ಶುದ್ಧ ದ್ವಾದಶಿಯಂದು ಬೆಳಗ್ಗೆ ಕೊಪ್ಪರಿಗೆ ಇಳಿದು ಆ ದಿನ ರಾತ್ರಿ ನೀರು ಬಂಡಿ ಉತ್ಸವ, ದೈವಗಳ ನಡಾವಳಿ ನಡೆಯುವುದರೊಂದಿಗೆ ಸಂಪನ್ನಗೊಳ್ಳಲಿದೆ” ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ತಿಳಿಸಿದ್ದಾರೆ.

ಸಾಯಂಕಾಲ ಸಂಜೆ 7ರಿಂದ ಶ್ರೀ ದೇವಳದ ರಾಜಗೋಪುರದ ಬಳಿಯಿಂದ ರಥಬೀದಿ, ಅಡ್ಡಬೀದಿ ಕಾಶಿಕಟ್ಟೆಯಾಗಿ ಕುಮಾರಧಾರದವರೆಗೆ ಕುಣಿತ ಭಜನಾ ಸಂಭ್ರಮವನ್ನು ದೇವಳದ ಆಡಳಿತವು ವಿಶೇಷವಾಗಿ ಹಮ್ಮಿಕೊಂಡಿದೆ.

ಈ ಭಜನಾ ಸಂಭ್ರಮದಲ್ಲಿ ಸುಮಾರು 1,000 ಭಜನಾ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಭಜನಾ ಸಂಭ್ರಮದಲ್ಲಿ ಪ್ರಮುಖವಾಗಿ ಖ್ಯಾತ ಗಾಯಕರಾದ ಜಗದೀಶ ಆಚಾರ್ಯ ಪುತ್ತೂರು ಭಾಗವಹಿಸಲಿದ್ದು, ಭಜನಾ ತಂಡಗಳ ಪ್ರಧಾನ ವೇದಿಕೆಯನ್ನು ಅಲಂಕರಿಸಲಿದ್ದಾರೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button