Breaking NewsLatestಇತರ ಕ್ರೀಡೆಕ್ರೀಡೆ
Neeraj Chopra: ನೀರಜ್ ಚೋಪ್ರಾ ಸೋಶಿಯಲ್ ಮೀಡಿಯಾ ಮೌಲ್ಯ 428 ಕೋಟಿ ರೂ!!!

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ ನ ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿರುವ ಭಾರತದ ನೀರಜ್ ಚೋಪ್ರಾ ಈಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿದರೆ ಕ್ರೀಡೆಯಲ್ಲಿ ಹೆಚ್ಚು ಬೆಲೆಬಾಳುವ ವ್ಯಕ್ತಿ ಎಂದರೆ ಅದು ನೀರಜ್ ಚೋಪ್ರಾ.
ಎಲ್ಲ ಸೋಶಿಯಲ್ ಮೀಡಿಯಾಗಳ ಮೌಲ್ಯವನ್ನು ಒಗ್ಗೂಡಿಸಿದರೆ ನೀರಜ್ ಚೋಪ್ರಾ ಅವರ ಮೌಲ್ಯ 428 ಕೋಟಿ ರೂ. ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಯುಗೊವ್ ಸ್ಪೋರ್ಟ್ಸ್ ನಡೆಸಿದ ಸಮೀಕ್ಷೆಯಲ್ಲಿ ನೀರಜ್ ಚಿನ್ನ ಗೆದ್ದನಂತರ ಅವರ ಅಭಿಮಾನಿಗಳ ಸಂಖ್ಯೆ ಅಗಾಧ ಪ್ರಮಾಣದಲ್ಲಿ ಏರಿಕೆಯಾಗಿದೆ.
1.4 ದಶಲಕ್ಷ ಜನರು 2.9 ದಶಲಕ್ಷ ಸಲ ಅವರ ಹೆಸರನ್ನು ದಾಖಲಿಸಿದ್ದಾರೆ. ಅವರ ಬಗ್ಗೆ ಬರೆದಿದ್ದಾರೆ. ಇದು 1401% ಮತ್ತು 2025% ಏರಿಕೆ ಎಂದು ದಾಖಲಾಗಿದೆ. ಒಟ್ಟಾರೆ 412 ದಶಲಕ್ಷದಷ್ಟು ತಲುಪಿದೆ. ಈ ಸಂಖ್ಯೆಗಳ ಆಧಾರದ ಮೇಲೆ ನೀರಜ್ ಅವರ ಸೋಶಿಯಲ್ ಮೀಡಿಯಾ ಮೌಲ್ಯ 428 ಕೋಟಿ ರೂ. ಆಗಿರುತ್ತದೆ.
