Breaking NewsLatestಮೆಟ್ರೋರಾಜ್ಯಸುದ್ದಿ

Shashikala Jolle : ದೇವಸ್ಥಾನಗಳನ್ನು ಖಾಸಗೀಕರಣ ಮಾಡುತ್ತಿಲ್ಲ : ಸಚಿವೆ ಶಶಿಕಲಾ ಜೊಲ್ಲೆ

ಬೆಂಗಳೂರು : ದೇವಸ್ಥಾನಗಳಿಗೆ ಸ್ವಾಯತ್ತತೆ ನೀಡುವುದು ಖಾಸಗೀಕರಣ ಮಾಡುವುದಲ್ಲ. ಈ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಬೇರೆ ರಾಜ್ಯಗಳಲ್ಲಿ ಯಾವ ಸ್ಥಿತಿ ಇದೆ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಇದು ಇನ್ನೂ ತೀರ್ಮಾನ ಆಗಿಲ್ಲ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದ್ದಾರೆ.

ವಿಕಾಸ ಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕರ್ನಾಟಕದ ಮುಜರಾಯಿ ಇಲಾಖೆಯಲ್ಲಿ ಐತಿಹಾಸಿಕ ದೇವಸ್ಥಾನಗಳು ಭಕ್ತರ ಸಂಕಲ್ಪ ಈಡೇರಿಸಿದ ದೇವಸ್ಥಾನಗಳಿವೆ. ಬೇರೆ ರಾಜ್ಯಗಳ ಭಕ್ತರು ರಾಜ್ಯದ ದೇವಸ್ಥಾನಗಳಿಗೆ ನಡೆದುಕೊಳ್ಳುತ್ತಾರೆ. ರಾಜ್ಯದ 205 ಎ ಗ್ರೇಡ್ ದೇವಸ್ಥಾನಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆ ದೇವಸ್ಥಾನದ ಜಾಗ ಕನಿಷ್ಠ 10 ಎಕರೆ ಗಿಂತ ಹೆಚ್ಚಿರಬೇಕು ಅಂತಹ ದೇವಸ್ಥಾನದಲ್ಲಿ ದೈವ ಸಂಕಲ್ಪ ಯೋಜನೆ ಹಾಕಿಕೊಳ್ಳಲಾಗಿದೆ. ಸ್ವಲ್ಪ ಸಮಯ ಹಿಡಿಯುತ್ತದೆ. ಬರುವ ಅಧಿವೇಶನದಲ್ಲಿ ಮಂಡನೆಯ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು.

ದೇವಸ್ಥಾನಗಳ ಅಭಿವೃದ್ಧಿಗೆ ಸರ್ಕಾರದ ಹಣ ವ್ಯಚ್ಚ ಮಾಡುವುದಿಲ್ಲ. ದೇವಸ್ಥಾನಗಳ ಆದಾಯದಿಂದಲೇ ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. ದೇವಸ್ಥಾನಗಳಲ್ಲಿ ಪೂಜಾ ವ್ಯವಸ್ಥೆ ಬೇರೆ ಬೇರೆ ಇವೆ. ಅಲ್ಲಿಗೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಇದಕ್ಕೆ 1040 ಕೋಟಿ ರೂ. ವೆಚ್ಚದ ಅಂದಾಜು ಮಾಡಲಾಗಿದೆ. ರಾಜ್ಯದಲ್ಲಿ 34517 ಸಿ ಗ್ರೇಡ್ ದೇವಸ್ಥಾನಗಳಿವೆ. ಸಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಜಿಲ್ಲೆಯ ಸಿ ಗ್ರೇಡ್ ನ ದೇವಸ್ಥಾನಗಳ ಪಟ್ಟಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

ಕಳೆದ ಬಾರಿ ಇಲಾಖೆಗೆ 119 ಕೋಟಿ ನೀಡಲಾಗಿದೆ. ಪ್ರತಿ ಬಾರಿ 60-70 ಕೋಟಿ ರೂ. ದೊರೆಯುತ್ತಿತ್ತು. ಜನರಿಗೆ ಭಾವನಾತ್ಮಕ ಸಂಬಂಧ ಇದೆ. ಈಗ ಸಿಎಂ 168 ಕೋಟಿ ವಿಶೇಷ ಅನುದಾನ ನೀಡಿದ್ದಾರೆ. ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ತಸ್ತಿಕ್ ಹೆಚ್ಚಳ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ರಾಜ್ಯದ ಮುಜರಾಯಿ ಹಾಗೂ ವಕ್ಫ್ ಆಸ್ತಿ ಸಮೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ. ಶೀಘ್ರವೇ ಡ್ರೋಣ್ ಮೂಲಕ ಸಮೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.

ಹೈಕಮಾಂಡ್ ನನ್ನ ಕೈ ಬಿಟ್ಟಿಲ್ಲ :

ಸಂಪುಟ ಪುನಾರಚನೆ ವಿಷಯ ಬಂದಾಗಲೆಲ್ಲ ಕೈ ಬಿಡುವವರ ಪಟ್ಟಿಯಲ್ಲಿ ನನ್ನ ಹೆಸರು ಮೊದಲು ಇರುತ್ತದೆ. ಆದರೆ, ನಮ್ಮ ಪಕ್ಷ ಹಾಗೂ ಹೈಕಮಾಂಡ್ ನನ್ನ ಕೈ ಬಿಟ್ಟಿಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತೆಯಾಗಿರುವ. ನನ್ನನ್ನು ಈ ಮಟ್ಟಕ್ಕೆ ಪಕ್ಷ ಬೆಳೆಸಿದೆ. ಪಕ್ಷ ಹಾಗೂ ಸಿಎಂ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದಳಾಗಿದ್ದೇನೆ ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button