Breaking NewsLatestರಾಷ್ಟ್ರೀಯಸುದ್ದಿ

ರಾಮನವಮಿ ಆಚರಣೆಯಂದು ಯುಪಿಯಲ್ಲಿ ಗಲಭೆಗಳು ನಡೆದಿಲ್ಲ: ಯೋಗಿ

ಲಕ್ನೋ: ಹಲವಾರು ರಾಜ್ಯಗಳಲ್ಲಿ ರಾಮನವಮಿ ಆಚರಣೆಯ ಸಂದರ್ಭದಲ್ಲಿ ಕೋಮು ಹಿಂಸಾಚಾರದ ಘಟನೆಗಳು ವರದಿಯಾಗಿದ್ದರೂ, ಉತ್ತರ ಪ್ರದೇಶ ಮುಖ್ಯಮಂತ್ರಿ ತಮ್ಮ ರಾಜ್ಯದಲ್ಲಿ ಹಿಂದೂ ಹಬ್ಬವು ಮುಸ್ಲಿಂ ಪವಿತ್ರ ತಿಂಗಳ ರಂಜಾನ್ ಸಮಯದಲ್ಲಿ ನಡೆದಿದ್ದರೂ ಸಹ ಅಂತಹ ಯಾವುದೇ ಹಿಂಸಾಚಾರ ಸಂಭವಿಸಿಲ್ಲ ಎಂದು ಹೇಳಿದ್ದಾರೆ.


ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ, “ಉತ್ತರ ಪ್ರದೇಶವು 25 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ರಾಜ್ಯಾದ್ಯಂತ 800 ರಾಮನವಮಿ ಮೆರವಣಿಗೆಗಳು ನಡೆದವು ಮತ್ತು ರಂಜಾನ್ ತಿಂಗಳು ಈ ಆಚರಣೆಗಳೊಂದಿಗೆ ಹೊಂದಿಕೊಂಡಿದೆ. ಅನೇಕ ರೋಜಾ ಇಫ್ತಾರ್ ಕಾರ್ಯಕ್ರಮಗಳು ನಡೆದಿವೆ. ಆದರೆ ಗಲಭೆಗಳನ್ನು ಬಿಡಿ ಎಲ್ಲಿಯೂ ಸಣ್ಣ ಜಗಳದ ಪ್ರಕರಣಗಳು ನಡೆದಿಲ್ಲ” ಎಂದಿದ್ದಾರೆ.


“ಯುಪಿಯ ಹೊಸ ಅಭಿವೃದ್ಧಿ ಕಾರ್ಯಸೂಚಿಯ” ಸಂಕೇತವಾಗಿದೆ. ಇಲ್ಲಿ ಗಲಭೆ, ಅನಾಚಾರ ಅಥವಾ ಗೂಂಡಾಗಿರಿಗೆ ಜಾಗವಿಲ್ಲ ಎಂದಿದ್ದಾರೆ. ಜೊತೆಗೆ ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಹಿಂಸಾತ್ಮಕ ಕೋಮು ಘರ್ಷಣೆಗಳಿಂದ ಆಚರಣೆಗಳನ್ನು ಹಾಳು ಮಾಡಲಾಗಿದೆ. ಇದರಲ್ಲಿ ಇಬ್ಬರು ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡಿದ್ದಾಗಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button